March 19, 2026
Thursday, March 19, 2026
spot_img

CINE | ಹಬ್ಬದ ದಿನ ಹಳೇ ಬೋರ್ಡ್‌ನಲ್ಲಿ ಹೊಸ ವಿಷಯ: ‘ಅಧ್ಯಾಯ 2’ ಬಗ್ಗೆ ಕುತೂಹಲ ಕೆರಳಿಸಿದ ರಿಷಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದಾ ವಿಭಿನ್ನವಾಗಿ ಸುದ್ದಿಯಾಗುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಯುಗಾದಿ ಹಬ್ಬದ ಶುಭಾಶಯ ಕೋರುವುದರ ಜೊತೆಗೆ ‘ಕಾಂತಾರ’ ಅಭಿಮಾನಿಗಳ ಎದಬಡಿತ ಹೆಚ್ಚಿಸಿದ್ದಾರೆ. ಸದ್ಯ ‘ಕಾಂತಾರ: ಚಾಪ್ಟರ್ 1’ (ಪ್ರೀಕ್ವೆಲ್) ಕೆಲಸಗಳಲ್ಲಿ ಬ್ಯುಸಿಯಾಗಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಫೋಟೋ ಈಗ ಚಿತ್ರಪ್ರೇಮಿಗಳ ನಿದ್ದೆಗೆಡಿಸಿದೆ.

ರಿಷಬ್ ಶೆಟ್ಟಿ ಅವರು ಬಿಳಿ ಬಣ್ಣದ ಬೋರ್ಡ್ ಒಂದರ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಮೇಲೆ ‘ಓಂ’ ಎಂದು ಬರೆಯಲಾಗಿದ್ದು, ಮಧ್ಯಭಾಗದಲ್ಲಿ “ಅಧ್ಯಾಯ 2 ಇಲ್ಲಿಂದ ಶುರು” ಎಂದು ಕನ್ನಡದಲ್ಲಿ ಬರೆಯಲಾಗಿದೆ. ಕೊನೆಯಲ್ಲಿ ‘ಹ್ಯಾಪಿ ಯುಗಾದಿ’ ಎಂದು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಈ ಫೋಟೋವನ್ನು ರಿಷಬ್ ಅವರು ಕೇವಲ ಹಂಚಿಕೊಂಡಿಲ್ಲ, ಬದಲಾಗಿ ತಮ್ಮ ಚಿತ್ರತಂಡದ ಪ್ರಮುಖ ಸದಸ್ಯರಿಗೆ ಟ್ಯಾಗ್ ಮಾಡಿದ್ದಾರೆ.

ಪತ್ನಿ ಪ್ರಗತಿ ಶೆಟ್ಟಿ

‘ಸೋ ಫ್ರಂ ಸೋ’ ಸಿನಿಮಾದ ರವಿಯಣ್ಣ ಪಾತ್ರದ ಖ್ಯಾತಿಯ ನಟ ಹಾಗೂ ಕಾಂತಾರ ಬರಹಗಾರ ಶಾನೀಲ್ ಗೌತಮ್

ಛಾಯಾಗ್ರಾಹಕ ಅರವಿಂದ್ ಕಶ್ಯಪ್

ಇವರಿಗೆ ಟ್ಯಾಗ್ ಮಾಡಿರುವುದರಿಂದ, ಕಾಂತಾರ ಮುಂದಿನ ಭಾಗ ಅಥವಾ ಚಾಪ್ಟರ್ 1 ರ ಎರಡನೇ ಹಂತದ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ ಎಂಬುದು ಅಭಿಮಾನಿಗಳ ವಾದ. ರಿಷಬ್ ಅವರ ಈ ‘ಅಧ್ಯಾಯ 2’ ರಹಸ್ಯ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !