March 17, 2026
Tuesday, March 17, 2026
spot_img

CINE | ಜನ ರೊಚ್ಚಿಗೆ ಏಳ್ತಿದ್ದಂತೆಯೇ ಸರ್ಸೆ ಸರ್ಸೆ ಹಾಡನ್ನು ಡಿಲೀಟ್‌ ಮಾಡಿದ ಆನಂದ್‌ ಆಡಿಯೋ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೇಮ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ಕೆಡಿಯಲ್ಲಿ ಪ್ರೇಮ್‌ ಸರ್ಸೆ ನಿನ್ನ ಸೆರಗ ಸರ್ಸೆ ಎನ್ನುವ ಹಾಡಿದೆ. ಈ ಹಾಡು ತನ್ನ ಕೆಟ್ಟ ಲಿರಿಕ್ಸ್‌ನಿಂದಾಗಿ ವೈರಲ್‌ ಆಗಿದೆ.

ನೆಗೆಟಿವ್‌ ಪ್ರಚಾರ ಹೆಚ್ಚಾದ ನಂತರ ಯುಟ್ಯೂಬ್‌ನಲ್ಲಿ ಆನಂದ್‌ ಆಡಿಯೋ ಈ ಹಾಡನ್ನು ಡಿಲೀಟ್‌ ಮಾಡಿದೆ ಎನ್ನುವ ಸುದ್ದಿ ಹರಿದಾಡಿತ್ತು.ಆದರೆ ಆನಂದ್‌ ಆಡಿಯೋ ಈ ಹಾಡನ್ನು ತೆಗೆದುಹಾಕಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ಸಾಹಿತ್ಯವನ್ನು ಟ್ರೋಲ್‌ ಮಾಡಲಾಗುತ್ತಿದೆ. ಇನ್ನೆಷ್ಟು ಕೆಳಮಟ್ಟಕ್ಕೆ ಇಳಿದು ಬರೆಯುತ್ತೀರಿ ಎಂದು ಜನ ರೊಚ್ಚಿಗೆದ್ದಿದ್ದಾರೆ. ಹಾಡಿನಲ್ಲಿ ಸಾಕಷ್ಟು ಅಶ್ಲೀಲ ಸಾಹಿತ್ಯ ಇದೆ. ಈ ಹಾಡನ್ನು ಕೇಳಿದ್ದ ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್, ಗೀತರಚನಕಾರರು ಇಷ್ಟು ಕೀಳು ಮಟ್ಟಕ್ಕೆ ಇಳಿದಿದ್ದನ್ನು ನೋಡಲು ಬೇಸರ ಆಗುತ್ತದೆ ಎಂದಿದ್ದರು.

ಈ ವಿರೋಧದ ಬೆನ್ನಲ್ಲೇ ಹಾಡು ಕೆಲ ಹೊತ್ತು ಯೂಟ್ಯೂಬ್​ನಿಂದ ಮಾಯ ಆಗಿತ್ತು . ಈಗ ಹಾಡು ಮತ್ತೆ ಮರಳಿದೆ. ಇದು ಚಿತ್ರಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡಿದೆ. ರಿಲೀಸ್​​ಗೆ ಕೆಲವೇ ವಾರಗಳು ಇರುವಾಗ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !