ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಆಟಗಾರ ಯಜುವೇಂದ್ರ ಚಾಹಲ್ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಆದರೆ ಈ ಬಾರಿ ಮದುವೆ, ಆಟದ ವಿಚಾರದಲ್ಲಿ ಅಲ್ಲ, ಬದಲಾಗಿ ಧೂಮಪಾನ ವಿಚಾರದಲ್ಲಿ ಚರ್ಚೆಗೆ ಕೇಂದ್ರ ಬಿಂದು ಆಗಿದ್ದಾರೆ .
ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಚಾಹಲ್ ಇದರ ನಡುವೆಯೇ ಧೂಮಪಾನ ಮಾಡಿ, ಸಿಗರೇಟ್ ತುಂಡನ್ನು ರಸ್ತೆಗೆ ಎಸೆದ ವಿಡಿಯೋ ವೈರಲ್ ಆಗಿದೆ. ಈ ವರ್ತನೆಗೆ ಅಭಿಮಾನಿಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಆದರೆ ಈ ವಿಡಿಯೋದಲ್ಲಿ ಇರುವ ವ್ಯಕ್ತಿ ಚಾಹಲ್ ಹೌದೋ? ಅಲ್ಲವೋ ಎಂಬುವುದು ಯಕ್ಷ ಪ್ರಶ್ನೆಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಚಾಹಲ್ ಅವರನ್ನು ಹೋಲುವಂಥ ವ್ಯಕ್ತಿ ಐಷಾರಾಮಿ ಕಾರನ್ನು ಚಾಲನೆ ಮಾಡುವಾಗ ಧೂಮಪಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಆದರೆ ಈ ವಿಡಿಯೋ ನಿಜವೋ ? ಎಲ್ಲಿ ಮತ್ತು ಯಾವಾಗ ಚಿತ್ರೀಕರಣಗೊಂಡಿದೆ ಎಂಬುವುದು ಸ್ಪಷ್ಟವಾಗಿಲ್ಲ. ಜೊತೆಗೆ ಈ ಕುರಿತು ಚಾಹಲ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಪ್ಲಾಟ್ಫಾರ್ಮ್ಗಳಲ್ಲಿ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ ಬರುತ್ತಿದೆ.



