ಕ್ರಿಕೆಟ್ ಗೆ ಗುಡ್ ಬೈ ಹೇಳಿ ಜಾವೆಲಿನ್ ನತ್ತ ಮುಖ ಮಾಡಿದ್ರಾ ದಿನೇಶ್​ ಕಾರ್ತಿಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ ಕ್ರಿಕೆಟಿಗ ದಿನೇಶ್​ ಕಾರ್ತಿಕ್ ಅವರು ಕ್ರಿಕೆಟ್ ಗೆ ವಿದಾಯ ಹೇಳಿ ಪ್ಯಾರಿಸ್​ ಒಲಿಂಪಿಕ್ಸ್(Paris Olympics 2024)​ ಕ್ರಿಡಾಕೂಟಕ್ಕೆ ಸಜ್ಜಾಗುತ್ತಿದ್ದಂತೆ ಕಾಣುತ್ತಿದೆ.

ಈ ರೀತಿ ಹೇಳಲು ಕಾರಣ ಟೋಕಿಯೊ ಒಲಿಂಪಿಕ್ಸ್​​ ಚಿನ್ನದ ವಿಜೇತ ನೀರಜ್​ ಚೋಪ್ರಾ ಜತೆ ಜಾವೆಲಿನ್​ ಅಭ್ಯಾಸ ನಡೆಸುತ್ತಿರುವ ವಿಡಿಯೋ.

ಪ್ಯಾರಿಸ್​ ಒಲಿಂಪಿಕ್ಸ್​ಗೆ ಸಿದ್ಧತೆಯಲ್ಲಿರುವ ನೀರಜ್​ ಚೋಪ್ರಾ ಜತೆ ದಿನೇಶ್​​ ಕಾರ್ತಿಕ್​ ಕೂಡ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬಹು ದೂರ ಜಾವೆಲಿನ್ ಎಸೆದು ಗಮನಸೆಳೆದಿದ್ದಾರೆ.
ಇದನ್ನು ಕಂಡ ನೆಟ್ಟಿಗರು ಡಿಕೆ ಅವರು ಈ ಬಾರಿ ಪ್ಯಾರಿಸ್​ನಲ್ಲಿ ನೀರಜ್​ ಚೋಪ್ರಾಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದು ಕಮೆಂಟ್​ ಮಾಡಿದ್ದಾರೆ.

ಆದ್ರೆ ಅಸಲಿಗೆ ಉಭಯ ಕ್ರೀಡಾಪಟುಗಳು ಜಾಹಿರಾತಿನ ಭಾಗವಾಗಿ ಜತೆಯಾಗಿ ಕಾಣಸಿಕೊಂಡಿದ್ದಾರೆ.

https://x.com/mufaddal_vohra/status/1795747344581038290?ref_src=twsrc%5Etfw%7Ctwcamp%5Etweetembed%7Ctwterm%5E1795747344581038290%7Ctwgr%5E0ae877c2049839396f4808c9117b72890c919880%7Ctwcon%5Es1_&ref_url=https%3A%2F%2Fvistaranews.com%2Fsports%2Fdinesh-karthik-dinesh-karthik-turns-javelin-thrower-alongside-neeraj-chopra%2F662648.html

ಕಳೆವು ವಾರಗಳ ಹಿಂದೆ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ(Federation Cup) ಕಣಕ್ಕಿಳಿದ್ದ ನೀರಜ್ ಚೋಪ್ರಾ(82.27 ಮೀ.), ಕನ್ನಡಿಗ ಡಿಪಿ ಮನು ಅವರಿಂದ ತೀವ್ರ ಪೈಪೋಟಿ ಎದುರಿಸಿ ಚಿನ್ನದ ಪದಕ ಗೆದ್ದಿದ್ದರು. ಈ ಟೂರ್ನಿ ಬಳಿಕ ನೀರಜ್​ ಗಾಯಗೊಂಡಿದ್ದು ಸದ್ಯ ವಿಶ್ರಾಂತಿಯಲ್ಲಿದ್ದಾರೆ.

ಇತ್ತ ದಿನೇಶ್​ ಕಾರ್ತಿಕ್​ ಅವರಿಗೆ ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಎಲಿಮಿನೇಟರ್​ ಪಂದ್ಯವೇ ವಿದಾಯ ಪಂದ್ಯ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಪಂದ್ಯ ಮುಕ್ತಾಯದ ಬಳಿಕ ಸಹ ಆಟಗಾರರು ಭಾವುಕರಾಗಿ ಕಾರ್ತಿಕ್​ಗೆ ಮೈದಾನದಲ್ಲಿಯೇ ತಬ್ಬಿಕೊಂಡು ವಿದಾಯ ಹೇಳಿದಂತಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!