ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಹಿ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೊಲ್ಲ ಹೇಳಿ. ಆದರೆ ಕೆಲವೊಮ್ಮೆ ವೈದ್ಯರು ಹೆಚ್ಚು ಸಿಹಿ ತಿನ್ಬೇಡಿ ಅಂತ ಸಲಹೆ ನೀಡಿರುತ್ತಾರೆ. ಅಂತಹವರು ಈ ಹಣ್ಣುಗಳನ್ನು ತಿನ್ನುವ ಮೂಲಕ ಸಿಹಿ ತಿನ್ನುವ ಬಯಕೆ ಈಡೇರಿಸಿಕೊಳ್ಳಬಹುದು.
1. ಸೀಬೆ ಹಣ್ಣು
ಸಾಮಾನ್ಯವಾಗಿ ಎಲ್ಲರಿಗೂ ಸುಲಭವಾಗಿ ಸಿಗುವ ಹಣ್ಣೆಂದರೆ ಸೀಬೆ ಹಣ್ಣು. ಇದು ಆರೋಗ್ಯದ ದೃಷ್ಟಿಯಿಂದಲೂ ತುಂಬಾನೇ ಒಳ್ಳೆಯದು. ನಿಯಮಿತವಾಗಿ ಸೀಬೆ ಹಣ್ಣನ್ನು ತಿನ್ನೋದ್ರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಸಿಹಿ ತಿನ್ನುವ ಬಯಕೆಯನ್ನೂ ಕೂಡ ಈ ಹಣ್ಣು ಈಡೇರಿಸುತ್ತದೆ.
2. ಕರ್ಬೂಜ ಹಣ್ಣು
ಬಿಸಿಲಿನ ಬೇಗೆಗೆ ಕರ್ಬೂಜ ಹಣ್ಣು ಸೇವನೆ ಒಳ್ಳೆಯದು. ಇದು ದೇಹವನ್ನು ಹೈಡ್ರೇಟ್ ಮಾಡಲು ಸಹಕಾರಿ. ಕರ್ಬೂಜ ಹಣ್ಣು ತಿನ್ನೋದಕ್ಕೆ ತುಂಬಾನೇ ಸಿಹಿಯಾಗಿರುತ್ತದೆ. ಇದ್ರಲ್ಲಿ ಕ್ಯಾಲೊರಿ ಅಂಶ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಸಿಹಿ ತಿನ್ನಬೇಕು ಅನ್ನಿಸಿದಾಗೆಲ್ಲಾ ಖರ್ಬೂಜ ಹಣ್ಣನ್ನು ಸೇವನೆ ಮಾಡಿದರೆ ಒಳ್ಳೆಯದು.
3. ಕಲ್ಲಂಗಡಿ ಹಣ್ಣು
ಬೇಸಿಗೆಯಲ್ಲಿ ದೇಹವನ್ನು ಡಿಹೈಡ್ರೇಟ್ ಮಾಡೋದಕ್ಕೆ ಕಲ್ಲಂಗಡಿ ಅತ್ಯತ್ತಮ ಹಣ್ಣು. ಅಧಿಕ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು ಸಕ್ಕರೆಗಿಂತಾನೂ ತುಂಬಾನೇ ಸಿಹಿಯಾಗಿದೆ. ಹೀಗಾಗಿ ಸಿಹಿ ತಿನ್ನಬೇಕು ಅಂದಾಗಲೆಲ್ಲಾ ಕೃತಕ ಸ್ವೀಟ್ ಗಳನ್ನು ಸೇವನೆ ಮಾಡುವ ಬದಲು ಕಲ್ಲಂಗಡಿ ನಿಮಗೆ ಅತ್ಯತ್ತಮ ಆಯ್ಕೆ.
4. ಮರಸೇಬು
ಮರಸೇಬು ನೋಡೋದಕ್ಕೆ ಸೇಬು ಹಣ್ಣಿನ ರೀತಿಯಲ್ಲೇ ಇದೆ. ಮರಸೇಬನ್ನು ನಿಯಮಿತವಾಗಿ ಸೇವನೆ ಮಾಡೋದ್ರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮರಸೇಬು ಆರೋಗ್ಯದ ದೃಷ್ಟಿಯಿಂದ ಉತ್ತಮ ಮಾತ್ರವಲ್ಲದೇ ರುಚಿಕರವೂ ಆಗಿದೆ. ಸಿಹಿ ಸೇವನೆ ಮಾಡಬೇಕು ಅನ್ನುವವರು ಮರಸೇಬು ತಿಂದು ತಮ್ಮ ಬಯಕೆ ಈಡೇರಿಸಿಕೊಳ್ಳಬಹುದು.
5. ಮಾವಿನ ಹಣ್ಣು
ಹಣ್ಣುಗಳ ರಾಜ ಎಂಬ ಬಿರುದು ಪಡೆದುಕೊಂಡಿರುವ ಮಾವಿನ ಹಣ್ಣು ಎಲ್ಲರಿಗೂ ಪ್ರಿಯ. ಮಾವಿನ ಹಣ್ಣು ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆಯ ಅಂಶವನ್ನು ಹೊಂದಿದ ಹಣ್ಣಾಗಿದೆ. ಇದು ಫೈಬರ್ ಮತ್ತು ವಿಟಮಿನ್ ಸಿ, ಎ, ಇ ಮತ್ತು ಕೆ ಸೇರಿದಂತೆ ವಿವಿಧ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಇದು ಸಕ್ಕರೆಯ ಕಡುಬಯಕೆಗಳನ್ನು ಹತೋಟಿಯಲ್ಲಿಡಲು ಮತ್ತು ಮನಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.