ಹೊಸದಿಗಂತ ಡಿಜಿಡಲ್ ಡೆಸ್ಕ್:
ನಟ ಜಗ್ಗೇಶ್ ಇದೀಗ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳು ಎದ್ದುಕಾಣಿಸುತ್ತಿವೆ.
ನಿರ್ದೇಶಕ ಗುರುಪ್ರಸಾದ್ ಜೊತೆ ಮಠ, ಎದ್ದೇಳು ಮಂಜುನಾಥದಂಥ ಹಿಟ್ ಸಿನಿಮಾಗಳನ್ನು ಜಗ್ಗೇಶ್ ನೀಡಿದ್ದು, ಇದೇ ಜೋಡಿ ರಂಗನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದೆ. ಇಂದು ಸಿನಿಮಾದ ಹಾಡು ರಿಲೀಸ್ ಆಗಲಿದೆ.
ಇದರ ಪ್ರೊಮೋದಲ್ಲಿ ಸ್ಯಾಂಡಲ್‌ವುಡ್ ನಟಿಯರನ್ನು ಕತ್ತೆಗೆ ಹೋಲಿಸಲಾಗಿದೆ ಎನ್ನುವ ವಿವಾದ ಆರಂಭವಾಗಿದೆ, ಜೊತೆಗೆ ಬಿಗ್‌ಬಾಸ್ ಶ್ರುತಿ ಹಾಗೂ ಮೀಟೂ ಶ್ರುತಿ ಎನ್ನುವ ಪದಗಳನ್ನೂ ಬಳಸಲಾಗಿದೆ. ಇಂದು ಹಾಡು ರಿಲೀಸ್ ಆಗಲಿದ್ದು, ಹಾಡಿನಲ್ಲಿ ನಿಜವಾಗಿಯೂ ಏನಿದೆ ಅನ್ನೋದನ್ನು ಕಾದುನೋಡಬೇಕಿದೆ.