ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಚಂಡೀಗಢದಲ್ಲಿ 2 ಎಕರೆ ವಿಸ್ತೀರ್ಣದ ವಿಶಾಲವಾದ ಹೊಸ ಬಂಗಲೆ ನೀಡಲಾಗಿದೆ ಎಂದು ಬಿಜೆಪಿ ಹೊಸ ವಾಗ್ದಾಳಿ ನಡೆಸಿದೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ಪಂಜಾಬ್ ರಾಜಧಾನಿ ಚಂಡೀಗಢದಲ್ಲಿ ಭಗವಂತ್ ಮಾನ್ ನೇತೃತ್ವದ ಸರ್ಕಾರವು “7-ಸ್ಟಾರ್ ಐಷಾರಾಮಿ ಬಂಗಲೆ”ಯನ್ನು ನೀಡಿದೆ ಎಂದು ಬಿಜೆಪಿ ಆರೋಪಿಸಿದೆ. ಅರವಿಂದ್ ಕೇಜ್ರಿವಾಲ್ ಅವರ ಬಂಗಲೆಯ ವೈಮಾನಿಕ ಫೋಟೋವನ್ನು ಹಂಚಿಕೊಂಡ ಬಿಜೆಪಿ, ಚಂಡೀಗಢದ ಸೆಕ್ಟರ್ 2ನಲ್ಲಿರುವ ಎರಡು ಎಕರೆ ನಿವಾಸವನ್ನು ಮುಖ್ಯಮಂತ್ರಿ ಕೋಟಾದಡಿಯಲ್ಲಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದೆ.
‘ಕಾಮನ್ ಮ್ಯಾನ್ ಎಂದು ನಟಿಸಿದ ವ್ಯಕ್ತಿ ದೆಹಲಿಯ ನಂತರ ಪಂಜಾಬ್ನಲ್ಲಿ ಮತ್ತೊಂದು ಭವ್ಯವಾದ ಶೀಷ್ ಮಹಲ್ ಅನ್ನು ನಿರ್ಮಿಸಿದ್ದಾರೆ. ದೆಹಲಿಯ ‘ಶೀಷ್ ಮಹಲ್’ ಅನ್ನು ಖಾಲಿ ಮಾಡಿದ ನಂತರ ಅರವಿಂದ್ ಕೇಜ್ರಿವಾಲ್ ಪಂಜಾಬಿನಲ್ಲಿ ಇನ್ನೊಂದು ಭವ್ಯವಾದ ಒಂದನ್ನು ನಿರ್ಮಿಸಿದ್ದಾರೆ ಎಂದು ಬಿಜೆಪಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
https://x.com/BJP4Chandigarh/status/1984195993857098088/photo/1
ಆದರೆ, ಈ ಆರೋಪಗಳನ್ನು “ಆಧಾರರಹಿತ” ಎಂದು ತಳ್ಳಿಹಾಕಿದ ಆಮ್ ಆದ್ಮಿ ಪಕ್ಷ , ಬಿಜೆಪಿ ತನ್ನ ಹೇಳಿಕೆಯನ್ನು ದೃಢೀಕರಿಸಲು ದಾಖಲೆ ತೋರಿಸುವಂತೆ ಒತ್ತಾಯಿಸಿದೆ. “ಮನೆ ಹಂಚಿಕೆ ಪತ್ರ ಎಲ್ಲಿದೆ?” ಎಂದು ಪ್ರಶ್ನಿಸಿದ ಎಎಪಿ, ಬಿಜೆಪಿಯ ಆರೋಪಗಳು ಆಧಾರರಹಿತ ಎಂದು ತಳ್ಳಿಹಾಕಿತು.

