ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್‌ಡಿಎ ನಾಯಕರಾಗಿ ಆಯ್ಕೆಯಾದ ಬಳಿಕ ಹಂಗಾಮಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದಿನಾಂಕ ನಿಗಧಿಯಾಗಿತ್ತು. ಆದ್ರೆ ಮೋದಿ ಅವರ ಪ್ರಮಾಣ ವಚನ ಸ್ವೀಕಾರದ ದಿನಾಂಕ ಹಾಗೂ ಸಮಯ ಬದಲಾಗುವ ಸಾಧ್ಯತೆ ಇದೆ.
ಜೂನ್ 8 ಅಂದ್ರೆ ಶನಿವಾರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಜೂನ್ 8ರ ಬದಲು ಜೂನ್ 9 ರಂದು ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.
ಮೋದಿ ಸತತ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ವಿದೇಶದ ಗಣ್ಯರಿಗೆ ಭಾರತ ಆಹ್ವಾನ ನೀಡಿದೆ. ವಿದೇಶದಿಂದ ಹಲವು ದೇಶದ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ದಿನಾಂಕವನ್ನು ಮುಂದೂಡಿರುವ ಸಾಧ್ಯತೆ ಇದೆ. ಭಾರತದ ಆಹ್ವಾನದ ಮೇರೆಗೆ ವಿದೇಶದಿಂದ ಗಣ್ಯರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.