ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸ್ಯಾಂಡಲ್ವುಡ್ ನಟಿ ಗಾಳಿಪಟ ಖ್ಯಾತಿಯ ನೀತು ಶೆಟ್ಟಿ ನಿನ್ನೆ ‘ಮದುವೆ ವಿಡಿಯೋ’ ಹಂಚಿಕೊಂಡು ಫ್ಯಾನ್ಸ್ಗಳನ್ನು ತಬ್ಬಿಬ್ಬುಗೊಳಿಸಿದ್ದಾರೆ.
ಇಂದು ಸಿನಿಮಾದಲ್ಲಿ ನಟಿಮಣಿಯರಿಗೆ ಬಾಡಿಶೇಮಿಂಗ್ ಎನ್ನುವ ದೊಡ್ಡ ಕಾಟವಿದೆ. ನೀನು ದಪ್ಪಗಿದ್ದೀಯಾ, ನಟಿಯಾಗೋಕೆ ಫಿಟ್ ಇಲ್ಲ ಎಂದು ನನಗೆ ಹೇಳಿದ್ದರು ಎಂದು ಕೆಲ ತಿಂಗಳ ಹಿಂದೆ ಹಂಚಿಕೊಂಡು ಸುದ್ದಿಯಾಗಿದ್ದ ನಟಿ ನೀತು ಶೆಟ್ಟಿ ಈಗ ಮದುವೆಯ ವಿಡಿಯೋದಿಂದ ಜಾಲತಾಣದಲ್ಲಿ (Social Media) ಸುದ್ದಿಯಾಗುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ನೀತು ಶೆಟ್ಟಿ (Neetu Shetty) ನಿನ್ನೆ ಅಂದರೆ ಏಪ್ರಿಲ್ 1 ರಂದು ಫೇಸ್ಬುಕ್ನಲ್ಲಿ ತಮ್ಮ ಮದುವೆಯ ವಿಡಿಯೋ ಎನ್ನುವ ಒಕ್ಕಣಿಗೆ ಕೊಟ್ಟು ಒಂದು ಲಿಂಕ್ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ಈಕೆಯ ಫೇಸ್‌ಬುಕ್ ಫಾಲೋವರ್ಸ್ ತಬ್ಬಿಬ್ಬಾಗಿದ್ದಾರೆ.
https://www.facebook.com/neethu.shetty.311/posts/10227022435160259
ಇತ್ತೀಚೆಗಷ್ಟೇ ನಟಿ ಸ್ವರಾ ಭಾಸ್ಕರ್ ಹೀಗೆ ಸರ್ಪ್ರೈಸ್ ಕೊಟ್ಟಿದ್ದನ್ನು ನೆನಪಿಸಿಕೊಂಡಿರುವ ನೆಟ್ಟಿಗರು, ಈ ಸಾಲಿಗೆ ನಟಿ ನೀತು ಕೂಡ ಸೇರಿಕೊಂಡು ಬಿಟ್ರಾ ಎಂದೆಲ್ಲಾ ಈ ಮೆಸೇಜ್ ನೋಡಿ ಅಂದುಕೊಂಡಿದ್ದಾರೆ. ಸಾಲದು ಎಂಬುದಕ್ಕೆ ನಟಿ ನೀತು, ‘ನನ್ನ ಮದುವೆಯ ವಿಡಿಯೋ ನಿಮ್ಮೆಲ್ಲರಿಗಾಗಿ.. ಹರಿಸಿ’ ಎಂದು ಬರೆದುಕೊಂಡು ವಿಡಿಯೋ ಲಿಂಕ್ ಒಂದನ್ನು ಶೇರ್ ಮಾಡಿದ್ದರು.
ಆದ್ರೆ ಆಕೆ ಕೊಟ್ಟ ಯೂಟ್ಯೂಬ್ ಲಿಂಕ್ ಓಪನ್ ಮಾಡಿದವರು ನಿಜಕ್ಕೂ ಫೂಲ್ ಆಗಿ, ಮತ್ತೊಮ್ಮೆ ಶಾಕ್ ಆಗಿದ್ದಾರೆ. ಏಪ್ರಿಲ್ ಒಂದರಂದು ನಟಿ ಅಭಿಮಾನಿಗಳಿಗೆ ಹೀಗೆ ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ಆ ಯೂಟ್ಯೂಬ್ ಲಿಂಕ್‌ನಲ್ಲಿರುವುದು ‘ಏಪ್ರಿಲ್ ಫೂಲ್ (April fool) ಬನಾಯಾ’ ಹಾಡು. 1964ರಲ್ಲಿ ಬಿಡುಗಡೆಯಾದ ಏಪ್ರಿಲ್ ಫೂಲ್ ಬಾಲಿವುಡ್ ಚಿತ್ರದಲ್ಲಿ ಮೊಹಮ್ಮದ್ ರಫಿ ಅವರು ಹಾಡಿದ ‘ಏಪ್ರಿಲ್ ಫೂಲ್ ಬನಾಯಾ’ ಹಾಡಿನ ಲಿಂಕ್ ಅವರು ಶೇರ್ ಮಾಡಿದ್ದು, ಫ್ಯಾನ್ಸ್ ಕಣ್ ಕಣ್ ಬಿಟ್ಟಿದ್ದಾರೆ.