ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾದ ಬ್ಯಾಟರ್ ಸ್ಮೃತಿ ಮಂಧಾನ ಮದುವೆ ಪೋಸ್ಟ್‌ಪೋನ್ ಆಗಿದೆ. ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭ ಅರ್ಧದಲ್ಲೇ ನಿಂತು ಹೋಗಿದೆ. ಅರಿಶಿಣ ಶಾಸ್ತ್ರ, ಸಂಗೀತ್, ಮೆಹೆಂದಿ ಎಲ್ಲವೂ ಆದ ನಂತರ ಮದುವೆಯ ದಿನವೇ ಸ್ಮೃತಿ ತಂದೆಗೆ ಹೃದಯಾಘಾತವಾಗಿದೆ ಎಂದು ಹೇಳಲಾಗಿದೆ. ಈ ಕಾರಣದಿಂದ ಸ್ಮೃತಿ ಮದುವೆಯನ್ನು ಪೋಸ್ಟ್‌ಪೋನ್ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಈ ಮದುವೆ ಬಗ್ಗೆ ಹಲವು ರೂಮರ್‌ಗಳು ಕಾಣಸಿಗುತ್ತಿವೆ. ಸ್ಮೃತಿ ಮಂಧಾನ ಮದುವೆಯ ಎಲ್ಲ ಫೋಟೊ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದಾರೆ. ಇಲ್ಲಿ ಬೇರೆ ಕಥೆಯೇ ನಡೆದಿದೆ ಎಂದು ಹೇಳಲಾಗಿದೆ. ಪಲಾಶ್ ಮುಚ್ಚಲ್ ಮದುವೆಯ ಹಿಂದಿನ ದಿನ ಕೋರಿಯೋಗ್ರಾಫರ್ ಜೊತೆ ಚೀಟ್ ಮಾಡಿದ್ದು, ಮದುವೆ ನಿಲ್ಲೋದಕ್ಕೆ ಕಾರಣ ಎಂದು ಹೇಳಲಾಗಿದೆ.
ಈ ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪಲಾಶ್ ಮುಚ್ಚಲ್ ಮದುವೆ ಹಿಂದಿನ ದಿನ ಕೊರಿಯೋಗ್ರಾಫರ್ ಜೊತೆ ಚೀಟ್ ಮಾಡಿದ್ದನ್ನು ಸ್ಮೃತಿ ಕಣ್ಣಾರೆ ನೋಡಿದ್ದಾರೆ. ಈ ಕಾರಣದಿಂದ ಅವರು ಮದುವೆಯನ್ನು ನಿಲ್ಲಿಸಿದ್ದಾರೆ. ನಂತರ ಈ ಇನ್ಸಿಡೆಂಟ್ ಮುಚ್ಚಿಹಾಕಲು ತಂದೆಯ ಅನಾರೋಗ್ಯ ಎಂದು ಹೇಳಲಾಗಿದೆ ಎನ್ನುವ ರೂಮರ್‌ಗಳು ಹರಿದಾಡುತ್ತಿದೆ. ಈ ಬಗ್ಗೆ ಪಲಾಶ್ ಆಗಲಿ ಅಥವಾ ಸ್ಮೃತಿ ಆಗಲಿ ಯಾವುದೇ ಹೇಳಿಕೆ ನೀಡಿಲ್ಲ.
ಮದುವೆಯ ಹಿಂದಿನ ದಿನವೇ ಕೊರಿಯೋಗ್ರಾಫರ್ ಜೊತೆ ಚೀಟ್ ಮಾಡಿದ್ರಾ ಪಲಾಶ್ ಮುಚ್ಚಲ್?

