ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಪಾರ್ವತಿ ಮೆನನ್ ಗುಟ್ಟಾಗಿ ಮದುವೆಯಾದ್ರಾ? ಹೀಗೆ ಗುಮಾನಿ ಶುರುವಾಗೋಕೆ ಕಾರಣ ಒಂದು ಫೋಟೊ..
ತುಂಬಾ ರಿಯಲ್ ಆಗಿ ಕಾಣಿಸೋ ಕಾರಣಕ್ಕೆ ಈ ಫೋಟೊ ವೈರಲ್ ಆಗಿದೆ, ಆದರೆ ಇದು ಪಾರ್ವತಿ ಮೆನನ್ ಮದುವೆ ಫೋಟೊ ಅಲ್ಲ, ಇದು ಸಿನಿಮಾ ಪ್ರೊಮೊ!
ಉಲ್ಲೋಜುಕ್ಕು ಎಂಬ ಸಿನಿಮಾದಲ್ಲಿ ಪಾರ್ವತಿ ನಟಿಸಿದ್ದಾರೆ. ಪ್ರಶಾಂತ್ ಮುರಳಿ ಈ ಚಿತ್ರದ ನಾಯಕ. ಸದ್ಯ ಈ ಚಿತ್ರದ 45 ಸೆಕೆಂಡಿನ ಪ್ರೋಮೋವೊಂದು ರಿಲೀಸ್ ಮಾಡಿದ್ದಾರೆ. ಪಾರ್ವತಿ ಮತ್ತು ಪ್ರಶಾಂತ್ ಮುರಳಿ ದಂಪತಿಗಳ ಪಾತ್ರ ನಿರ್ವಹಿಸುತ್ತಿದ್ದಾರೆ. ರೀಲ್‌ನಲ್ಲಿ ಆಗಷ್ಟೇ ಮದುವೆಯಾಗಿರುವ ನವಜೋಡಿ ದೋಣಿಯಲ್ಲಿ ಕುಳಿತು ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಸದ್ಯ ಪ್ರೋಮೋ ಎಲ್ಲರ ಗಮನ ಸೆಳೆದಿದೆ. ಅಂದಹಾಗೆ, ಇದೇ ಜೂನ್ 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ.