ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಲೀಪ್ಮೋಡ್ಗೆ ಜಾರಿರುವ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ನನ್ನು ಇಂದು ಎಬ್ಬಿಸುವ ಪ್ರಯತ್ನವನ್ನು ಇಸ್ರೋ ಮಾಡಲಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಹಾಗೂ ರೋವರ್ ಇರುವ ಸ್ಥಳದ ಮೇಲೆ ಶುಕ್ರವಾರ ಸೂರ್ಯನ ಬೆಳಕು ಬೀಳುವುದರಿಂದ ಪ್ಯಾನೆಲ್ ಮೇಲೆ ಬೆಳಕು ಬಿದ್ದು ಎಚ್ಚರವಾಗುವ ಸಾಧ್ಯತೆ ಇತ್ತು. ಆದರೆ ಎಚ್ಚರಿಸುವ ಪ್ರಯತ್ನವನ್ನು ಒಂದು ದಿನದ ಮಟ್ಟಿಗೆ ಇಸ್ರೋ ಮುಂದೂಡಿದ್ದು, ಇಂದು ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಎಚ್ಚರವಾಗುವ ಸಾಧ್ಯತೆ ಇದೆ.
ಸೆ.22ರ ಸಂಜೆಯೇ ರೋವರ್ ಹಾಗೂ ಲ್ಯಾಂಡರ್ನ್ನು ಸಕ್ರಿಯಗೊಳಿಸುವ ಯೋಜನೆ ಹಾಕಿದ್ದೆವು, ಕೆಲ ಕಾರಣಗಳಿಂದಾಗಿ ಅದನ್ನು ಮುಂದೂಡಲಾಗಿದೆ. ನಿದ್ರಾವಸ್ಥೆಯಿಂದ ಹೊರತಂದು ಚಾಲನೆ ನೀಡಲು ಯೋಜನೆ ಹೊಂದಿದ್ದೇವೆ ಎಂದು ಇಸ್ರೋ ಹೇಳಿದೆ.
ನಿನ್ನೆಯಿಂದಲೂ ಇಸ್ರೋ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ನೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಲೇ ಇದೆ. ಇನ್ನೂ ಪ್ರಯತ್ನವನ್ನು ಕೈಬಿಡುವುದಿಲ್ಲ ಎಂದು ಇಸ್ರೋ ಹೇಳಿದೆ.