ಮನೆಯಲ್ಲಿ ನಾಯಿ ಸಾಕುವುದರಿಂದ ಅದೆಷ್ಟೋ ಉಪಯೋಗಗಳಿವೆ ಎಂಬುದು ತಿಳಿದಿದ್ಯಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೊದಲೆಲ್ಲಾ ಸಾಕು ಪ್ರಾಣಿಯೆಂದರೆ ಹಸು, ಕುರಿ, ಮೇಕೆ, ಕೋಳಿ ಅಂತ ಕರೆಯುತ್ತಿದ್ದರು. ಇದೀಗ ನಾಯಿಯೂ ಈ ಸ್ಥಾನ ದಕ್ಕಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ತಮಗಿಷ್ಟವಾದ ಪ್ರಾಣಿಗಳನ್ನು ಮನೆಯಲ್ಲಿ ಸಾಕುವ ಅಭ್ಯಾಸ ರೂಢಿಯಲ್ಲಿದೆ. ಅದರಂತೆ ನಾಯಿ ಸಾಕುವುದರಿಂದಾಗುವ ಪ್ರಯೋಜನಗಳ ಬಗ್ಗೆಯೂ ತಿಳಿಯೋಣ..

  • ನಾಯಿಯು ಮನೆಯ ಕಾವಲು ಮಾತ್ರವಲ್ಲದೆ ಮಾನಸಿಕ ಸಂತೋಷವನ್ನು ತರುತ್ತದೆ ಎಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಇವುಗಳೊಂದಿಗೆ ಆಟವಾಡುವುದು ಒತ್ತಡವನ್ನು ನಿವಾರಿಸುತ್ತದೆ.
  • ಸಂತೋಷ, ಖುಷಿ ಜೊತೆಗೆ ನಮ್ಮ ಕಾಳಜಿಯನ್ನೂ ಮಾಡುತ್ತದೆ.
  • ಮಾಲೀಕರ ಸುರಕ್ಷತೆಯ ಬಗ್ಗೆ ತುಂಬಾ ಎಚ್ಚರವಾಗಿರುತ್ತವೆ ಅವರಿಗೆ ಏನಾದರೂ ತೊಂದರೆ ಕಂಡುಂದರೆ ತಕ್ಷಣ ರಕ್ಷಣೆಗೆ ಧಾವಿಸುತ್ತವೆ.
  • ನಾಯಿಯನ್ನು ದತ್ತು ಪಡೆಯುವುದು ಮನೆಗೆ ಮಂಗಳಕರವಂತೆ. ಪುರಾಣಗಳಲ್ಲಿಯೂ ನಾಯಿಗಳ ಪ್ರಸ್ತಾಪವಿದೆ. ನಾಯಿಯನ್ನು ಕಾಲಭೈರವ ಎಂದೂ ಕರೆಯಲಾಗುತ್ತದೆ. ಕಾಲ ಭೈರವನ ಆರಾಧನೆಯು ಬಹಳ ವಿಶೇಷವಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ.
  • ಪ್ರತಿದಿನ ನಾಯಿಗೆ ಆಹಾರವನ್ನು ನೀಡಿದರೆ ಶನಿದೇವನ ಆಶೀರ್ವಾದ ಸಿಕ್ಕು, ಅವರಿಗೆ ಶನಿದೋಷ ಇರುವುದಿಲ್ಲವಂತೆ
  •  ಮನೆಯಲ್ಲಿ ಉತ್ಸಾಹವಿದ್ದರೆ ಪಾಸಿಟಿವ್ ಎನರ್ಜಿ ಬರುತ್ತದೆ..ಅದರ ಗಲಾಟೆ ಎಲ್ಲವೂ ಮನಸಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ.
  • ಆತ್ಮವಿಶ್ವಾಸ, ನಿಯತ್ತಿಗೆ ಮತ್ತೊಂದು ರೂಪವೇ ಶ್ವಾನ. ಒಂದು ಕಪ್ ಹಾಲು, ಸ್ವಲ್ಪ ಊಟ ಕೊಟ್ಟರೆ ಸಾಕು ಅನ್ನ ಕೊಟ್ಟವರನ್ನು ಎಲ್ಲಿ ನೋಡಿದರೂ ತಕ್ಷಣವೇ ತಮ್ಮ ಬಾಲವನ್ನು ಅಲ್ಲಾಡಿಸುತ್ತದೆ.
  • ಮನೆ, ಮಾಲೀಕರಿಗೆ ರಕ್ಷಣೆ ನೀಡುವುದಷ್ಟೇ ಅಲ್ಲ..ಹಾವು ಮತ್ತಿತರ ಸರೀಸೃಪಗಳು ಬರದಂತೆ ನೋಡಿಕೊಳ್ಳುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!