ಕುಂಭಮೇಳದಲ್ಲಿ ಕಾಲ್ತುಳಿತವಾದಾಗ ರಾಜೀನಾಮೆ ಕೊಟ್ರಾ?: ಸಿಎಂ ಸಿದ್ದು ಕೌಂಟರ್ ಅಟ್ಯಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸೌಧದಲ್ಲಿ KSCA ಮತ್ತು RCB ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಸರ್ಕಾರ ಆಯೋಜನೆ ಮಾಡಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ಕೆಎಸ್‌ಸಿಎ, ಆರ್‌ಸಿಬಿ ವಿಧಾನಸೌಧ ಬಳಿ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದಕ್ಕೆ ನಾನು ಒಪ್ಪಿಕೊಂಡಿದ್ದೆ. ಗೋವಿಂದರಾಜು ಕರೆ ಮಾಡಿ ರಾಜ್ಯಪಾಲರಿಗೆ ಕೊಟ್ಟರು. ನೀವು ಬನ್ನಿ ಎಂದು ಹೇಳಿದೆ. ಅಧಿಕೃತ ಆಹ್ವಾನ ಯಾರು ಕೊಟ್ಟಿದ್ದಾರೆ ಗೊತ್ತಿಲ್ಲ ಎಂದರು.

ರಾಜೀನಾಮೆ ಕೇಳಿದ ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದು, ಕುಂಭಮೇಳ, ಗೋಧ್ರಾ ಹತ್ಯಾಕಾಂಡ, ಕೋವಿಡ್ ಸಮಯದಲ್ಲಿ ಆಮ್ಲಜನಕ ಸಿಗದೇ ಎಷ್ಟು ಜನ ಸತ್ತಿದ್ದಾರೆ? ಆಗ ಬಿಜೆಪಿಗರು ರಾಜೀನಾಮೆ ನೀಡಿದ್ದಾರಾ ಎಂದು ತಿರುಗೇಟು ನೀಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!