ಹೃದಯದ ಆಕಾರದಲ್ಲಿ ಟ್ರಾಫಿಕ್ ರೆಡ್ ಲೈಟ್: ಬೆಂಗಳೂರಿನಲ್ಲಿ ಬದಲಾದ ದೀಪಗಳು, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾವತ್ತಾದ್ರೂ ಟ್ರಾಫಿಕ್‌ ದೀಪದ ಆಕಾರದಲ್ಲಿ ಬದಲಾವಣೆ ನೋಡಿದ್ದೀರಾ..? ನಿಯಮಗಳನ್ನು ಮೀರಿ ಯಾವುದೇ ರೀತಿ ಆಕಾರ ಬದಲಾವಣೆಗೆ ಸಾಧ್ಯವಿಲ್ಲ. ಆದರೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಕೆಂಪು ದೀಪ ಬದಲಾಗಿದ್ದು, ಹೃದಯದ ಆಕಾರದಲ್ಲಿ ಕಂಡುಬಂದಿದೆ. ಅಕ್ಟೋಬರ್ 2ರಂದು ‘ವಿಶ್ವ ಹೃದಯ ದಿನ’ ಆಚರಣೆಯಲ್ಲಿ ಕೆಂಪು ದೀಪಗಳನ್ನು ಬದಲಾಯಿಸಲಾಗಿದೆ.

ವಾಹನ ಸವಾರರಿಗೆ ಕೆಂಪು ದೀಪವನ್ನು ಹೃದಯದ ಆಕಾರದಲ್ಲಿ ಕಾಣುವಂತೆ ಬದಲಾಯಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯ ನಡೆದಿದೆ. ಮಣಿಪಾಲ್ ಆಸ್ಪತ್ರೆಗಳ ಮನವಿ ಮೇರೆಗೆ ಇದನ್ನು ಜಾರಿಗೆ ತರಲಾಗಿದೆ. ಇತ್ತೀಚಿಗೆ ಚಿಕ್ಕ ವಯಸ್ಸಿನಲ್ಲೇ ಅನೇಕ ಮಂದಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಎಲ್ಲರೂ ಜಾಗೃತರಾಗಿ ಎಚ್ಚರಿಕೆ ವಹಿಸಬೇಕು ಸೂಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಬೆಂಗಳೂರು ನಗರದ ಎಲ್ಲಾ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹೃದಯಾಕಾರದ ಕೆಂಪು ದೀಪಗಳಿವೆ.

ಕೆಂಪು ದೀಪಗಳ ಜತೆಗೆ ಕೆಲವು ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಹೃದಯದ ಆಕಾರದ ಮಧ್ಯದಲ್ಲಿ ಕ್ಯೂಆರ್ ಕೋಡ್ ಅನ್ನು ಸಹ ಹಾಕಲಾಗಿದೆ. ಇದನ್ನು ಸ್ಕ್ಯಾನ್ ಮಾಡುವ ಮೂಲಕ ತುರ್ತು ಸೇವೆಗಳನ್ನೂ ಪಡೆಯಬಹುದು. ಇದಲ್ಲದೇ ಮಣಿಪಾಲ್ ಆಸ್ಪತ್ರೆ ಹಾಗೂ ಸರ್ಕಾರ ಹೃದ್ರೋಗಗಳ ಕುರಿತು ಆಡಿಯೋ, ವಿಡಿಯೋ ರೂಪದಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!