ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಮಂತಾ ಸಾಲದಲ್ಲಿ ಸಿಲುಕಿದ್ದಾರೆ, ತಮ್ಮ ಟ್ರೀಟ್‌ಮೆಂಟ್‌ಗೂ ಕೂಡ ಸ್ನೇಹಿತರ ಬಳಿ ಸಾಲ ಪಡೆದಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಇದೀಗ ಸಮಂತಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ರೀತಿ ಸುದ್ದಿಗಳು ಹೇಗೆ ಹುಟ್ಟುತ್ತವೆ? ನನ್ನ ಕಾಯಿಲೆಗೆ ನಟನಿಂದ 25 ಕೋಟಿ ರೂಪಾಯಿ ಪಡೆದಿದ್ದೇನೆ ಎಂದು ಹೇಳುತ್ತಿದ್ದಾರೆ. ನನಗೆ ಅಷ್ಟು ದೊಡ್ಡ ಕಾಯಿಲೆ ಬಂದಿಲ್ಲ, ಅದರ ಚಿಕಿತ್ಸೆಗೆ ಅಷ್ಟೊಂದು ಹಣ ಕೂಡ ಬೇಕಾಗಿಲ್ಲ. ಬೇರೆಯವರ ಬಳಿ ಸಾಲ ಮಾಡುವಂತ ದುಸ್ಥಿತಿ ನನಗಿನ್ನೂ ಬಂದಿಲ್ಲ. ನನ್ನ ದುಡಿಮೆಯಲ್ಲಿ ಬದುಕುತ್ತಿದ್ದೇನೆ, ಬೇಕಾಬಿಟ್ಟಿ ಮಾತನಾಡುವ ಮುನ್ನ ಎಚ್ಚರ ಇರಲಿ ಎಂದು ಸಮಂತಾ ಹೇಳಿದ್ದಾರೆ.