ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ಮೂಡಿರುವುದರಿಂದ, ಜನರು ಸಕ್ಕರೆ ಇರುವ ಪಾನೀಯಗಳನ್ನು ಬಿಟ್ಟು “ಡಯಟ್ ಸೋಡಾ” ಅಥವಾ “ಡಯಟ್ ಡ್ರಿಂಕ್” ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಾಮಾನ್ಯ ಪಾನೀಯಗಳಿಗಿಂತ ಕ್ಯಾಲೊರಿಯಿಲ್ಲದೆ ಸಕ್ಕರೆ ಬದಲು ಕೃತಕ ಸ್ವೀಟ್ನರ್‌ಗಳನ್ನು ಬಳಸುವ ಕಾರಣದಿಂದ ಡಯಟ್ ಡ್ರಿಂಕ್ ಆರೋಗ್ಯಕ್ಕೆ ಹಾನಿ ಕಡಿಮೆ ಮಾಡುತ್ತದೆ ಎಂಬ ಅಭಿಪ್ರಾಯವಿದೆ. ಆದರೆ ವೈದ್ಯರು ಹಾಗೂ ಪೌಷ್ಠಿಕ ತಜ್ಞರ ಪ್ರಕಾರ, ಇದು ಸಂಪೂರ್ಣ ಸತ್ಯವಲ್ಲ. ಡಯಟ್ ಡ್ರಿಂಕ್ ಕೆಲವು ಮಟ್ಟಿಗೆ ಉತ್ತಮವಾದರೂ, ಹೆಚ್ಚು ಸೇವನೆಯು ದೀರ್ಘಕಾಲದಲ್ಲಿ ದೇಹಕ್ಕೆ ತೊಂದರೆ ತರಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಡಯಟ್ ಡ್ರಿಂಕ್‌ಗಳ ಲಾಭಗಳು
ಮೊದಲನೆಯದಾಗಿ, ಡಯಟ್ ಸೋಡಾದಲ್ಲಿ ಸಕ್ಕರೆಯ ಅಂಶ ಕಡಿಮೆಯಿರುವುದರಿಂದ ಮಧುಮೇಹ ಹಾಗೂ ತೂಕ ಹೆಚ್ಚಳವನ್ನು ನಿಯಂತ್ರಿಸಲು ಎಂದು ತಜ್ಞರು ಹೇಳುತ್ತಾರೆ. ಸಾಮಾನ್ಯ ಪಾನೀಯಗಳಿಗಿಂತ ಕ್ಯಾಲೊರಿ ಕಡಿಮೆ ಇರುವುದರಿಂದ ತೂಕ ಇಳಿಸಲು ಬಯಸುವವರು ಇದನ್ನು ಹೆಚ್ಚು ಕುಡಿಯುತ್ತಾರೆ. ಕೆಲ ಅಧ್ಯಯನಗಳಲ್ಲಿ, ಇದು ತಾತ್ಕಾಲಿಕವಾಗಿ ಹಲ್ಲುಗಳಿಗೆ ಹಾನಿ ಕಡಿಮೆ ಮಾಡಬಹುದು ಎಂದು ಕಂಡುಬಂದಿದೆ.
ಹಾನಿಕರ ಪರಿಣಾಮಗಳು
ಆದರೆ ಇನ್ನೊಂದು ಕಡೆ, ಡಯಟ್ ಸೋಡಾದಲ್ಲಿ ಬಳಸುವ ಕೃತಕ ಸಿಹಿ ಪದಾರ್ಥಗಳು (Artificial Sweeteners) ಹಾರ್ಮೋನ್ ಬದಲಾವಣೆ ಹಾಗೂ ಮೆಟಾಬಾಲಿಸಂ ಮೇಲೆ ಪರಿಣಾಮ ಬೀರಬಹುದು ಎಂದು ಕೆಲವು ಅಧ್ಯಯನಗಳು ಎಚ್ಚರಿಸಿದೆ. ನಿಯಮಿತ ಸೇವನೆಯು ಹೃದಯ ಸಂಬಂಧಿ ಕಾಯಿಲೆ, ಹೊಟ್ಟೆಯ ಕೊಬ್ಬು ಹಾಗೂ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ತಜ್ಞರ ಅಭಿಪ್ರಾಯ
ಆರೋಗ್ಯ ತಜ್ಞರ ಪ್ರಕಾರ, “ಡಯಟ್ ಡ್ರಿಂಕ್‌ಗಳನ್ನು ಮಿತವಾಗಿ ಸೇವಿಸುವುದು ಸಮಸ್ಯೆಯಾಗುವುದಿಲ್ಲ. ಆದರೆ ಪ್ರತಿದಿನ ಹೆಚ್ಚಾಗಿ ಸೇವಿಸಿದರೆ ದೇಹದ ಸಮತೋಲನಕ್ಕೆ ಹಾನಿಯಾಗಬಹುದು” ಎಂದು ಹೇಳಲಾಗಿದೆ. ತೂಕ ನಿಯಂತ್ರಣಕ್ಕಾಗಿ ನೀರು, ಗ್ರೀನ್ ಟೀ ಅಥವಾ ನೈಸರ್ಗಿಕ ಹಣ್ಣಿನ ರಸ ಸೇವಿಸುವುದು ಉತ್ತಮ ಪರ್ಯಾಯ ಎಂದು ಸಲಹೆ ನೀಡಲಾಗಿದೆ.
ಹೀಗಾಗಿ, ಡಯಟ್ ಸೋಡಾ ಸಂಪೂರ್ಣವಾಗಿ ಕೆಟ್ಟದಲ್ಲ. ಆದರೆ ಇದನ್ನು ಆರೋಗ್ಯಕರ ಪಾನೀಯವೆಂದು ಭಾವಿಸಿ ಹೆಚ್ಚು ಸೇವಿಸುವುದು ಕೂಡ ತಪ್ಪು. ಮಿತವಾದ ಸೇವನೆ ಹಾಗೂ ನೈಸರ್ಗಿಕ ಪಾನೀಯಗಳಿಗೆ ಆದ್ಯತೆ ನೀಡುವುದು ಉತ್ತಮ ಆರೋಗ್ಯಕ್ಕಾಗಿ ಅಗತ್ಯ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)