TYPES OF TEARS| ಕಣ್ಣೀರಲ್ಲಿ ಎಷ್ಟೆಲ್ಲಾ ವಿಧಗಳಿವೆ ಎಂದು ನಿಮಗೆ ತಿಳಿದಿದೆಯೇ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಣ್ಣೀರು ಬರೋದಕ್ಕೂ ಕಾರಣವಿದೆ, ಖುಷಿ, ದುಃಖ, ನೋವು ಹೀಗೆ ಸಂದರ್ಭ ಬೇರೆ ಬೇರೆ ಭಾವನೆಗಳಿಂದ ಕಣ್ಣೀರು ಬರುತ್ತದೆ. ಆದರೆ ಕಣ್ಣೀರಿಗೂ ವ್ಯತ್ಯಾಸವಿದೆ ಎಂಬ ಮಾತು ಎಷ್ಟು ಸತ್ಯ?

ಕಣ್ಣೀರು ಕಣ್ಣುಗಳನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಕ್ಲೀವ್ಲ್ಯಾಂಡ್ ಕ್ಲಿನಿಕ್ ಮೆಡಿಕಲ್ ಸೆಂಟರ್‌ನ ಡಾ. ಮೈಕೆಲ್ ರೋಜೆನ್ ಪ್ರಕಾರ, ಭಾವನಾತ್ಮಕ ಕಣ್ಣೀರು ದೇಹವು ಸಾಕಷ್ಟು ಪೋಷಕಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಒಬ್ಬ ವ್ಯಕ್ತಿಯು ದುಃಖ, ಸಂತೋಷ, ಭಯ ಅಥವಾ ಇತರ ಭಾವನೆಗಳನ್ನು ಅನುಭವಿಸಿದಾಗ ಉತ್ಪತ್ತಿಯಾಗುವ ಕಣ್ಣೀರಿನಲ್ಲಿ ಹೆಚ್ಚುವರಿ ಹಾರ್ಮೋನುಗಳು ಮತ್ತು ಪ್ರೋಟೀನ್‌ಗಳು ಇರುತ್ತವೆ ಎಂದು ವಿಜ್ಞಾನಿಗಳು ನಂಬುತ್ತಾರೆ.

ಆದರೆ ವಿಭಿನ್ನ ಭಾವನೆಗಳ ಆಧಾರದ ಮೇಲೆ ಕಣ್ಣೀರು ವಿಭಿನ್ನ ಅಣುಗಳನ್ನು ಹೊಂದಿರುತ್ತದೆ. ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಇವೆಲ್ಲವೂ ವಿಭಿನ್ನವಾಗಿ ಕಾಣುತ್ತವೆ. “ದಿ ಟೋಪೋಗ್ರಫಿ ಆಫ್ ಟಿಯರ್ಸ್” ಪುಸ್ತಕಕ್ಕಾಗಿ ಛಾಯಾಗ್ರಾಹಕಿ ರೋಸ್-ಲಿನ್ ಫಿಶರ್ ತೆಗೆದ ಫೋಟೋಗಳಲ್ಲಿ ಈ ವ್ಯತ್ಯಾಸವು ಸ್ಪಷ್ಟವಾಗಿದೆ. “ಕಣ್ಣೀರಿನ ದೃಶ್ಯ ತನಿಖೆ” ಗಾಗಿ ಫಿಶರ್ ಡಿಜಿಟಲ್ ಮೈಕ್ರೋಸ್ಕೋಪಿ ಕ್ಯಾಮೆರಾದಲ್ಲಿ ಆಪ್ಟಿಕಲ್ ಸ್ಟ್ಯಾಂಡರ್ಡ್ ಲೈಟ್ ಮೈಕ್ರೋಸ್ಕೋಪ್ ಬಳಸಿ ಕೆಲವು ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ. ಈ ಯೋಜನೆಗಾಗಿ ರೋಸ್ ಲಿನ್ ಫಿಶರ್ ಅವರು 8 ವರ್ಷಗಳ ಕಾಲ ಭಾವನಾತ್ಮಕ ಕಣ್ಣೀರನ್ನು ಸಂಗ್ರಹಿಸಿ ಫೋಟೋಗಳನ್ನು ತೆಗೆದಿದ್ದಾರೆ.

Rose-Lynn Fisher ವಿಜ್ಞಾನಿಯಲ್ಲ, ಕೇವಲ ದೃಶ್ಯ ಕಲಾವಿದೆ ಎಂಬ ಆಸಕ್ತಿಯಿಂದ ಈ ಪ್ರಾಜೆಕ್ಟ್ ಮಾಡಿದ್ದೇನೆ ಎಂದಿದ್ದಾರೆ. ಆದಾಗ್ಯೂ, ಸೂಕ್ಷ್ಮದರ್ಶಕದ ಅಡಿಯಲ್ಲಿ ನೋಡಿದಾಗ ಕಣ್ಣೀರು ವಿಭಿನ್ನವಾಗಿ ಕಾಣುತ್ತದೆ. ಆದರೆ ಅನೇಕರು ಈ ಪ್ರಕ್ರಿಯೆಯನ್ನು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ತಳ್ಳಿಹಾಕಿದರು. ಮತ್ತು ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆದ ನಂತರವಷ್ಟೇ ಅಸಲಿ ವಿಷಯ ತಿಳಿಯಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!