ಬೆಳಗ್ಗೆ ಹಣ್ಣು ತಿನ್ನೋದು ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೆ ಯಾವ ಹಣ್ಣು ಹೊಟ್ಟೆಯಲ್ಲಿ ಎಷ್ಟು ಹೊತ್ತಿನಲ್ಲಿ ಜೀರ್ಣವಾಗುತ್ತದೆ ಅನ್ನೋದನ್ನ ಹೆಚ್ಚಿನವರು ಗಮನಿಸೋದಿಲ್ಲ. ಜೀರ್ಣಕ್ರಿಯೆ ಸರಿಯಾಗಿದ್ದರೆ ಮಾತ್ರ ದೇಹಕ್ಕೆ ಪೋಷಕಾಂಶಗಳು ಸರಿಯಾಗಿ ಸೇರುತ್ತವೆ. ಅದಕ್ಕಾಗಿ ಹಣ್ಣುಗಳ ಜೀರ್ಣ ಸಮಯ ತಿಳಿದುಕೊಳ್ಳುವುದು ಉಪಯುಕ್ತ.
ಕಲ್ಲಂಗಡಿ, ಪಪ್ಪಾಯಿ: ಇವು ನೀರಿನ ಪ್ರಮಾಣ ಜಾಸ್ತಿಯಿರುವ ಹಣ್ಣುಗಳು. ಸುಮಾರು 30–45 ನಿಮಿಷಗಳಲ್ಲಿ ಜೀರ್ಣವಾಗುತ್ತವೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಉತ್ತಮ.
ಸೇಬು, ಪೇರಳೆ: ಫೈಬರ್ ಹೆಚ್ಚು ಇರುವುದರಿಂದ 1–2 ಗಂಟೆಗಳವರೆಗೆ ಜೀರ್ಣಕ್ರಿಯೆ ತೆಗೆದುಕೊಳ್ಳುತ್ತದೆ. ಹೊಟ್ಟೆ ತುಂಬಿದ ಅನುಭವ ಕೊಡುತ್ತವೆ.
ಕಿತ್ತಳೆ, ಮಾವು: ಈ ಹಣ್ಣುಗಳು 1 ಗಂಟೆಯಿಂದ 1.5 ಗಂಟೆಗಳೊಳಗೆ ಜೀರ್ಣವಾಗುತ್ತವೆ. ಎನರ್ಜಿ ನೀಡುವ ಹಣ್ಣುಗಳು ಇವು.
ಇದನ್ನೂ ಓದಿ: IND vs NZ ಸರಣಿಗೂ ಮುನ್ನ ಟೀಮ್ ಇಂಡಿಯಾಗೆ ಶಾಕ್: ತಿಲಕ್ ವರ್ಮಾ ಔಟ್! ಯಾಕಂತೆ?
ಬಾಳೆಹಣ್ಣು: ಕಾರ್ಬೋಹೈಡ್ರೇಟ್ ಹೆಚ್ಚು ಇರುವ ಕಾರಣ 2 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಹೊಟ್ಟೆ ತುಂಬಿದ ಭಾವ ನೀಡುತ್ತದೆ.
ದ್ರಾಕ್ಷಿ, ಬೆರ್ರಿಗಳು: ಸುಲಭವಾಗಿ ಜೀರ್ಣವಾಗುವ ಹಣ್ಣುಗಳು. ಸುಮಾರು 40–60 ನಿಮಿಷ ಸಾಕು.
ಹಣ್ಣುಗಳನ್ನು ಊಟದ ನಂತರ ಅಲ್ಲ, ಊಟಕ್ಕೂ ಮುನ್ನ ಅಥವಾ ಮಧ್ಯಾಹ್ನ ಲಘು ಆಹಾರವಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

