ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಯದ ಅರಿವೇ ಇಲ್ಲದಂತೆ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಮೊಬೈಲ್, ಟಿವಿ ಹಾಗೂ ಲ್ಯಾಪ್‌ಟಾಪ್ ಬಳಕೆ ಮಾಡುವ ಈ ಕಾಲದಲ್ಲಿ ಗ್ಯಾಡ್ಜೆಟ್ಸ್‌ಗಳಿಂದ ದೂರ ಇರಲು ಸ್ಟ್ರಿಕ್ಟ್ ರೂಲ್ಸ್ ಅನಿವಾರ್ಯವಾಗಿದೆ.
ಏನಿದು ಡಿಜಿಟಲ್ ಡೀಟಾಕ್ಸ್?
ಮನೆಯಲ್ಲಿ ನಾಲ್ಕು ಮಂದಿ ಇದ್ದಾರೆ ಎಂದು ಅಂದುಕೊಳ್ಳಿ, ಮಕ್ಕಳು ಮೊಬೈಲ್, ತಂದೆ-ತಾಯಿ ಟಿವಿ ನೋಡ್ತಾ ಇರುತ್ತಾರೆ. ಮಕ್ಕಳು ಹಾಗೂ ಪೋಷಕರು ಬೆಳಗ್ಗೆ ಒಂಬತ್ತಕ್ಕೆ ಮನೆ ಬಿಟ್ಟರೆ ಸಂಜೆ ಐದು ಗಂಟೆಗೆ ಮನೆಯಲ್ಲಿ ಇರುತ್ತಾರೆ. ಮನೆಯ ಸಣ್ಣ ಪುಟ್ಟ ಕೆಲಸ ಮುಗಿಸಿದ ನಂತರ ಎಲ್ಲರೂ ಅವರವರ ಲೋಕದಲ್ಲಿ ಮುಳುಗಿರುತ್ತಾರೆ. ಈ ಕೆಟ್ಟ ಸೈಕಲ್‌ನ್ನು ತಪ್ಪಿಸೋಕೆ ಡಿಜಿಟಲ್ ಡೀಟಾಕ್ಸ್ ಅವಶ್ಯ. ಮೊಬೈಲ್, ಟಿವಿ, ವಿಡಿಯೋ ಗೇಮ್ಸ್, ಲ್ಯಾಪ್‌ಟಾಪ್ ಹಾಗೂ ಇನ್ನಿತರ ಎಲೆಕ್ರಾನಿಕ್ ಪದಾರ್ಥಗಳನ್ನು ಎರಡು ಗಂಟೆಗಳ ಕಾಲ ಬದಿಗಿಟ್ಟು ಪುಸ್ತಕದ ಕಡೆ ಗಮನಕೊಡೋದು.
ಏಳು ಗಂಟೆಗೆ ಸೈರನ್
ಪ್ರತೀ ದಿನ ಏಳು ಗಂಟೆಗೆ ಒಂದು ಸೈರನ್ ಮೊಳಗುತ್ತದೆ. ಅದು ಡಿಜಿಟಲ್ ಡೀಟಾಕ್ಸ್ ಆರಂಭದ ಶಬ್ದ. ಈ ಸದ್ದು ಬಂದ ನಂತರ ಎಲ್ಲೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬದಿಗಿಟ್ಟು ಎಲ್ಲರೂ ಪುಸ್ತಕ ಕೈಗೆ ಹಿಡಿಯಬೇಕು. ದೊಡ್ಡವರು ಕೂಡ. ಓದುವ ಹವ್ಯಾಸ ಆರಂಭಿಸಬೇಕು. ಮಕ್ಕಳು ಹೋಮ್‌ವರ್ಕ್ ಅಥವಾ ಓದಲು ಎರಡು ಗಂಟೆ ನೀಡಬೇಕು.
ಮುಖ್ಯಸ್ಥರು ಮನೆಗೇ ಬರ್ತಾರೆ
ಮಕ್ಕಳು ಓದ್ತಿದ್ದಾರಾ ಇಲ್ವಾ ಎಂದು ಚೆಕ್ ಮಾಡಲು ಊರಿನವರೆಲ್ಲ ಸೇರಿ ಇಷ್ಟು ಜನರನ್ನು ನೇಮಕ ಮಾಡಿರುತ್ತಾರೆ. ಅವರು ಎರಡು ಗಂಟೆ ಗಸ್ತು ತಿರುಗಿ ಮನೆಗೆ ಬರುತ್ತಾರೆ. ಮಕ್ಕಳು ಓದುತ್ತಿರುವ ಪುಸ್ತಕ ತೆಗೆದುಕೊಂಡು ಪ್ರಶ್ನೆ ಕೇಳುತ್ತಾರೆ.
ಈ ಪ್ರಯೋಗವನ್ನು ಮೊದಲು ಸಾಂಗ್ಲಿ ಜಿಲ್ಲೆಯ ವಡ್ಗಾಂವ್ ನಿವಾಸಿಗಳು ಮೂರು ವರ್ಷಗಳ ಹಿಂದೆಯೇ ಡಿಜಿಟಲ್ ಡಿಟಾಕ್ಸ್ ಅನ್ನು ಪ್ರಾರಂಭಿಸಿದ್ದರು. ಬಳಿಕ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹಳಗಾ ಗ್ರಾಮವೂ ಇಂಥದ್ದೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇದರಿಂದ ಪ್ರೇರೇಪಿತವಾದ ಇಲ್ಲಿನ ಗ್ರಾಮ ಪಂಚಾಯಿತಿ, ಮಕ್ಕಳ ಓದು ಮತ್ತು ಹವ್ಯಾಸವನ್ನು ಬದಲಿಸಲು ಡಿಜಿಟಲ್ ಡಿಟಾಕ್ಸ್ ನಿಯಮ ಜಾರಿ ಮಾಡಿದೆ.
AWARENESS | ಪ್ರತೀ ಊರಲ್ಲೂ ಬರಬೇಕು ʼಡಿಜಿಟಲ್ ಡೀಟಾಕ್ಸ್ʼ ಏಳು ಗಂಟೆಗೆ ಎಲ್ಲ ಗ್ಯಾಡ್ಜೆಟ್ಸ್ ಬಂದ್!

