May 2, 2026
Saturday, May 2, 2026
spot_img

ಪಾದಚಾರಿ ಮಾರ್ಗದ ಭಕ್ತರಿಗೆ ಟಿಟಿಡಿ ಬಂಪರ್ ಗಿಫ್ಟ್: ಬೆಟ್ಟ ಹತ್ತೋದು ಈಗ ಇನ್ನು ಈಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಪ್ರಸಿದ್ಧ ತಿರುಮಲ ದೇವಸ್ಥಾನಕ್ಕೆ ಬರುವ ಕೋಟ್ಯಂತರ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನಂ ಎರಡು ಪ್ರಮುಖ ನಿರ್ಧಾರಗಳನ್ನು ಜಾರಿಗೆ ತಂದಿದೆ. ಭಕ್ತರ ಲಗೇಜ್ ನಿರ್ವಹಣೆಯನ್ನು ಸರಳಗೊಳಿಸುವುದು ಮತ್ತು ಲಡ್ಡು ಪ್ರಸಾದದ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.

ಭಕ್ತರು ತಮ್ಮ ಸಾಮಾನು ಸರಂಜಾಮುಗಳನ್ನು ಸುರಕ್ಷಿತವಾಗಿ ಇರಿಸಲು ತಿರುಮಲದಾದ್ಯಂತ ಒಟ್ಟು 80 ಲಗೇಜ್ ಕೌಂಟರ್‌ಗಳನ್ನು ಸಿದ್ಧಪಡಿಸಲಾಗಿದೆ.

ಒಟ್ಟು 394 ಸಿಬ್ಬಂದಿಗಳು ಮೂರು ಶಿಫ್ಟ್‌ಗಳಲ್ಲಿ ದಿನದ 24 ಗಂಟೆಯೂ ಕೆಲಸ ಮಾಡಲಿದ್ದಾರೆ. ಅಲಿಪಿರಿ ಮತ್ತು ಶ್ರೀವರಿ ಮೆಟ್ಟು ಮಾರ್ಗಗಳಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದ್ದು, ಭಕ್ತರು ಬೆಟ್ಟದ ಕೆಳಗೆ ಲಗೇಜ್ ನೀಡಿ, ಬೆಟ್ಟ ಹತ್ತಿದ ನಂತರ ತಿರುಮಲದಲ್ಲಿ ಪಡೆದುಕೊಳ್ಳಬಹುದು.

ಉಚಿತ ಸಭಾಂಗಣ, ನಾರಾಯಣಗಿರಿ ಶೆಡ್, ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮತ್ತು 300 ರೂ. ದರ್ಶನ ಟಿಕೆಟ್ ಕೇಂದ್ರಗಳಲ್ಲೂ ಕೌಂಟರ್ ಸೌಲಭ್ಯ ವಿಸ್ತರಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !