ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಚಕ್ರದಡಿ ಗೋ ಫಸ್ಟ್ ಕಾರ್ ಸಿಲುಕಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಇಂದು ಬೆಳಗ್ಗೆ ಘಟನೆ ನಡೆದಿದೆ. ಇಂಡಿಗೋ A320neo ವಿಮಾನ ನಿಂತಿದ್ದಾಗ ಗೋ ಫಸ್ಟ್ ಕಾರು ಅಲ್ಲಿಗೆ ತೆರಳಿದ್ದು, ಸ್ವಲ್ಪದರಲ್ಲೇ ವಿಮಾನದ ಮುಂದಿನ ಚಕ್ರಕ್ಕೆ ಡಿಕ್ಕಿಯಾಗುವುದು ತಪ್ಪಿದೆ.
ವಿಮಾನ ನಿಲ್ದಾಣದ ಟರ್ಮಿನಲ್ ಸ್ಟ್ಯಾಂಡ್ ಸಂಖ್ಯೆ 201ರಲ್ಲಿ ಘಟನೆ ಸಂಭವಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತನಿಖೆಗೆ ಆದೇಶ ನೀಡಿದೆ.
ಕಾರು ಚಾಲಕನಿಗೆ ಮದ್ಯ ಸೇವನೆಯ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಿಂದ ಪಾಟ್ನಾಗೆ ಹೊರಡಲು ಸಿದ್ಧವಾಗುತ್ತಿದ್ದ ವಿಮಾನದ ಬಳಿ ಗೋ ಫಸ್ಟ್ ಏರ್ಲೈನ್ಗೆ ಸೇರಿರುವ ಸ್ವಿಫ್ಟ್ ಡಿಜೈರ್ ಕಾರು ದಿಢೀರ್ ಆಗಮಿಸಿ ವಿಮಾನದಡಿ ಸಿಲುಕಿದೆ.