ಹೊಸದಿಗಂತ ವರದಿ,ರಾಮನಗರ :
ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಪಿಎಸಿ ಎಂಎಸ್ ಅಧ್ಯಕ್ಷರಾಗಿ ಅಂಜನಾಪುರ ವಾಸು (ಶ್ರೀನಿವಾಸ್) ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಕೆ.ಪಾರ್ಥ ಅವರ ರಾಜೀನಾಮೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಚಂದ್ರಪ್ಪ, ಜೆಡಿಎಸ್ ಬೆಂಬಲಿತ ನಿರ್ದೇಶಕ ಅಂಜನಾಪುರವಾಸು ನಾಮಪತ್ರ ಸಲ್ಲಿಸಿದ್ದರು.
ನಂತರ ಚುನಾವಣೆ ನಡೆದು ಅಂಜನಾಪುರ ವಾಸು 7 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಚಂದ್ರಪ್ಪ 6 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವ ಣಾಧಿಕಾರಿಯಾಗಿ ಸಹಕಾರ ಇಲಾಖೆಯ ಮಂಜು ನಾಥ್ ಕರ್ತವ್ಯ ನಿರ್ವಹಿಸಿ ಫಲಿತಾಂಶ ಘೋಷಿ ಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ ನಿರ್ದೇಶಕರು ಭಾಗವಹಿಸಿದ್ದರು.
ರೈತರ ಸಹಕಾರಿ ಬ್ಯಾಂಕ್ ಆಗಿರುವ ಪಿಎಸಿಎಂಎಸ್ ನಲ್ಲಿ ಪಕ್ಷಾತೀತವಾಗಿ ಎಲ್ಲರ ಸಹಕಾರ ಪಡೆದು ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತೇನೆ. ನನ್ನನ್ನು ಆಯ್ಕೆ ಮಾಡಿದ ಎಲ್ಲ ನಿರ್ದೇಶಕರು, ಎನ್ ಡಿಎ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನೂತನ ಅಧ್ಯಕ್ಷ ಅಂಜನಾಪುರ ವಾಸು ಅವರನ್ನು ಜೆಡಿಎಸ್ ಬೆಂಬಲಿತ ನಿರ್ದೇಶಕರಾದ ರೇವಣ್ಣ, ರಮೇಶ್, ಚಂದ್ರಮ್ಮಆನಂದ್, ಗುರುಸ್ವಾಮಿ, ಸಂಘದ ಸಿಇಓ ಶಾಂತಕುಮಾರ್, ಮುಖಂಢರಾದ ಆನಂದ್ (ರೇಷ್ಮೆ ಇಲಾಖೆ), ಪಿ.ನಾಗರಾಜು ಮಾಜಿ ಉಪಾಧ್ಯಕ್ಷರು ಪಿಎಸಿಎಂಎಸ್, ಅಂಜನಾಪುರದ ಮಹದೇವು(ಬಣ್ಣದ ಅಂಗಡಿ , ಕಿರಣ್, ರಾಮು, ಲಕ್ಕಹೆಗ್ಡೆ ಮತ್ತಿತರರು ಹಾಜರಿದ್ದು ಅಭಿನಂದಿಸಿದರು.