Wednesday, September 3, 2025

Health Tips | ಬೆಳ್ಳುಳ್ಳಿ ತಿನ್ನೋದ್ರಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಅಂತ ನೀವೂ ತಿಳ್ಕೊಳಿ!

ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಬೆಳ್ಳುಳ್ಳಿ ಕೇವಲ ರುಚಿ ಹೆಚ್ಚಿಸುವ ಪದಾರ್ಥವಲ್ಲ, ದೇಹಕ್ಕೆ ಅನೇಕ ಔಷಧೀಯ ಗುಣಗಳನ್ನು ನೀಡುವ ನೈಸರ್ಗಿಕ ಪೌಷ್ಠಿಕಾಂಶದ ಮೂಲವಾಗಿದೆ. ಪ್ರಾಚೀನ ಆಯುರ್ವೇದದಿಂದ ಇಂದಿನ ವೈಜ್ಞಾನಿಕ ಅಧ್ಯಯನಗಳವರೆಗೂ ಬೆಳ್ಳುಳ್ಳಿಯ ಮಹತ್ವವನ್ನು ಒತ್ತಿ ಹೇಳಲಾಗಿದೆ. ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಿ ದೇಹವನ್ನು ಒಳಗಿನಿಂದ ಬಲಿಷ್ಠಗೊಳಿಸುತ್ತದೆ. ಆದರೆ ಅತಿಯಾಗಿ ಸೇವಿಸಿದರೆ ಹಾನಿಕಾರಕವಾಗುವ ಸಾಧ್ಯತೆಗಳೂ ಇವೆ.

ದೇಹಕ್ಕೆ ಶಕ್ತಿ ಮತ್ತು ತೂಕ ನಿಯಂತ್ರಣ

ಬೆಳ್ಳುಳ್ಳಿಯಲ್ಲಿ ಚಯಾಪಚಯವನ್ನು ಉತ್ತೇಜಿಸುವ ಅಂಶಗಳಿದ್ದು ದೇಹದಲ್ಲಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲ ಎಸಳು ಬೆಳ್ಳುಳ್ಳಿ ಸೇವಿಸಿದರೆ ತೂಕ ನಿಯಂತ್ರಣಕ್ಕೆ ಸಹಕಾರಿ. ಇದು ಜೀರ್ಣಾಂಗವನ್ನು ಚುರುಕುಗೊಳಿಸಿ ಅನಗತ್ಯ ಕೊಬ್ಬು ಸಂಗ್ರಹವನ್ನು ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿ ಮತ್ತು ಹೃದಯದ ಆರೋಗ್ಯ

ಹಸಿ ಬೆಳ್ಳುಳ್ಳಿಯ ಸೇವನೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಿಸಲು ವೈದ್ಯರು ಬೆಳ್ಳುಳ್ಳಿ ಸೇವನೆ ಮಾಡುವಂತೆ ಸೂಚಿಸುತ್ತಾರೆ. ಇದಲ್ಲದೆ ರಕ್ತ ಸಂಚಲನ ಸುಧಾರಿಸಿ ಹೃದಯವನ್ನು ರಕ್ಷಿಸುತ್ತದೆ.

ಚರ್ಮ ಮತ್ತು ಜೀರ್ಣಾಂಗದ ಲಾಭ

ಬೆಳ್ಳುಳ್ಳಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ. ಮೊಡವೆ, ಕಲೆಗಳನ್ನು ತಗ್ಗಿಸುವುದರ ಜೊತೆಗೆ ಚರ್ಮಕ್ಕೆ ಹೊಳಪು ನೀಡುತ್ತದೆ. ಅಜೀರ್ಣ ಹಾಗೂ ಇತರೆ ಜೀರ್ಣಾಂಗದ ತೊಂದರೆಗಳಿಗೂ ಇದು ಒಳ್ಳೆಯ ನೈಸರ್ಗಿಕ ಔಷಧಿ.

ನಿಯಂತ್ರಿತ ಪ್ರಮಾಣದಲ್ಲಿ ಸೇವನೆ ಅಗತ್ಯ

ಬೆಳ್ಳುಳ್ಳಿಯಲ್ಲಿ ನಿರ್ವಿಷಗೊಳಿಸುವ ಗುಣಗಳಿದ್ದರೂ ಹೆಚ್ಚು ಸೇವಿಸಿದರೆ ಹೊಟ್ಟೆ ಉರಿಯೂತ, ಗ್ಯಾಸ್ಟ್ರಿಕ್ ಹಾಗೂ ಅಲರ್ಜಿ ಸಮಸ್ಯೆ ಉಂಟಾಗಬಹುದು. ಗರ್ಭಿಣಿಯರು, ಚಿಕ್ಕ ಮಕ್ಕಳು, ಲೋ ಬಿಪಿ ಇರುವವರು, ಮಧುಮೇಹಿಗಳು ಹಾಗೂ ಮಲಬದ್ಧತೆ ಅಥವಾ ಗ್ಯಾಸ್ಟ್ರೋಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ ಇರುವವರು ಬೆಳ್ಳುಳ್ಳಿ ಸೇವನೆ ತಪ್ಪಿಸಬೇಕು.

ಇದನ್ನೂ ಓದಿ