ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ನಟಿ, ಡಿಜಿಟಲ್ ಕ್ರಿಯೇಟರ್ ದಿಶಾ ಮದನ್ 78ನೇ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಿದ್ದಾರೆ. ರೆಡ್ ಕಾರ್ಪೆಟ್ನಲ್ಲಿ ನಟಿ ಹೆಜ್ಜೆ ಹಾಕಿದ್ದಾರೆ.
70 ವರ್ಷಗಳ ಹಿಂದಿನ ಕೆಂಪು ಸೀರೆಯುಟ್ಟು ನಟಿ ಕಂಗೊಳಿಸಿದ್ದು, ಸಾಮಾಜಿ ಜಾಲತಾಣದಲ್ಲಿ ಫೋಟೊಗಳು ವೈರಲ್ ಆಗಿವೆ.
ಫ್ರಾನ್ಸ್ನಲ್ಲಿ ಅದ್ಧೂರಿಯಾಗಿ ಕಾನ್ ಫಿಲ್ಮ್ ಫೆಸ್ಟಿವಲ್ಗೆ ಚಾಲನೆ ಸಿಕ್ಕಿದೆ. ಅತೀ ದೊಡ್ಡ ಚಲನಚಿತ್ರೋತ್ಸವಕ್ಕೆ ದೇಶ ವಿದೇಶದ ನಟ-ನಟಿಯರು ಭಾಗಿಯಾಗಿದ್ದಾರೆ. ಈ ಚಲನಚಿತ್ರೋತ್ಸವದಲ್ಲಿ ಕನ್ನಡ ಕಿರುತೆರೆ ನಟಿ ದಿಶಾ ಮದನ್ ಕೂಡ ಭಾಗಿಯಾಗಿದ್ದು, ರೆಡ್ ಕಾರ್ಪೆಟ್ನಲ್ಲಿ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಶೋಲ್ಡರ್ ಲೆಸ್ ಬ್ಲೌಸ್ಗೆ ಕೆಂಪು ಸೀರೆಯನ್ನು ಡಿಫರೆಂಟ್ ಆಗಿ ಉಟ್ಟಿದ್ದಾರೆ. 70 ವರ್ಷಗಳ ಹಿಂದಿನ ಕಾಂಚಿವರಂ ಸೀರೆಗೆ ನಟಿ ಹೊಸ ರೂಪ ಕೊಟ್ಟಿದ್ದಾರೆ.