ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣ ಸಂಬಂಧ ದಿಶಾ ಅವರ ತಂದೆಯ ವಕೀಲರು ಮುಂಬೈ ಪೊಲೀಸರಿಗೆ ಪ್ರಕರಣ ದಾಖಲಿಸಿದ್ದು , ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ, ಮಾಜಿ ಉನ್ನತ ಪೊಲೀಸ್ ಅಧಿಕಾರಿ ಮತ್ತು ಇತರರ ವಿರುದ್ಧ ಆರೋಪಿಸಿದ್ದಾರೆ.
ಈ ಬಗ್ಗೆ ದೂರು ನೀಡಿದ್ದ ಅವರು, ಆದಿತ್ಯ ಠಾಕ್ರೆ, ನಟರಾದ ಡಿನೋ ಮೋರಿಯಾ ಮತ್ತು ಸೂರಜ್ ಪಾಂಚೋಲಿ ಮತ್ತು ಅವರ ಸೆಕ್ಯುರಿಟಿ ಮಾಜಿ ಉನ್ನತ ಪೊಲೀಸ್ ಅಧಿಕಾರಿ ಪರಂಬೀರ್ ಸಿಂಗ್, ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮತ್ತು ರಿಯಾ ಚಕ್ರವರ್ತಿ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಈ ಕುರಿತು ದಿಶಾ ತಂದೆ ಪರ ವಕೀಲ ನೀಲೇಶ್ ಓಜಾ ಮಾತನಾಡಿದ್ದು ,ಇಂದು ನಾವು ಪೊಲೀಸ್ ಆಯುಕ್ತರಿಗೆ (ಸಿಪಿ) ಲಿಖಿತ ದೂರು (ಎಫ್‌ಐಆರ್) ಸಲ್ಲಿಸಿದ್ದೇವೆ. ಈ ಎಫ್‌ಐಆರ್‌ನಲ್ಲಿ ಆದಿತ್ಯ ಠಾಕ್ರೆ, ಡಿನೋ ಮೋರಿಯಾ, ಸೂರಜ್ ಪಾಂಚೋಲಿ ಮತ್ತು ಅವರ ಅಂಗರಕ್ಷಕರಾದ ಪರಂಬೀರ್ ಸಿಂಗ್, ಸಚಿನ್ ವಾಜೆ ಮತ್ತು ರಿಯಾ ಚಕ್ರವರ್ತಿ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಸಾವಿನ ಪ್ರಕರಣದ ಮಾಸ್ಟರ್ ಮೈಂಡ್ ಪರಂಬೀರ್ ಸಿಂಗ್ ಎಂದು ಆರೋಪಿಸಿರುವ ವಕೀಲರು, ಪತ್ರಿಕಾಗೋಷ್ಠಿ ನಡೆಸಿ, ಆದಿತ್ಯ ಠಾಕ್ರೆ ಅವರನ್ನು ರಕ್ಷಿಸಲು ಸುಳ್ಳುಗಳನ್ನು ಸೃಷ್ಟಿಸಿದರು. ಆದಿತ್ಯ ಠಾಕ್ರೆ ಮಾದಕವಸ್ತು ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ಎನ್‌ಸಿಬಿಯ ತನಿಖಾ ಪತ್ರಗಳು ಸಾಬೀತುಪಡಿಸುತ್ತವೆ ಮತ್ತು ಈ ವಿವರವನ್ನು ಎಫ್‌ಐಆರ್‌ನಲ್ಲಿಯೂ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
ನಟರಾದ ಆದಿತ್ಯ ಪಂಚೋಲಿ ಮತ್ತು ಡಿನೋ ಮೋರಿಯಾ ಹಾಗೂ ಶಿವಸೇನೆ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಮತ್ತು ಅವರ ಅಂಗರಕ್ಷಕರು ಸೆಲೆಬ್ರಿಟಿ ಮ್ಯಾನೇಜರ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವುದನ್ನು ಕಂಡ ಪ್ರತ್ಯಕ್ಷದರ್ಶಿಗಳು ಇದ್ದಾರೆ ಎಂದು ವಕೀಲರು ಈ ಹಿಂದೆ ಹೇಳಿದ್ದರು. ದಿಶಾ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ, ಜೂನ್ 8, 2020 ರಂದು ಮುಂಬೈನ ಬಹುಮಹಡಿ ಕಟ್ಟಡದಿಂದ ಬಿದ್ದು ನಿಧನರಾದರು. ನಂತರ ಪೊಲೀಸರು ಅವರ ಸಾವನ್ನು ಆತ್ಮಹತ್ಯೆ ಎಂದು ಹೇಳಿದ್ದರು. ಆದರೆ ದಿಶಾ ತಂದೆ ಈ ಪೊಲೀಸರ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದರು. ತನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಅವರು ಹೇಳಿದ್ದರು.