September 13, 2026
Sunday, September 13, 2026
spot_img

ದಿಶಾ ಸಾಲಿಯಾನ್‌ ಸಾವಿನ ತನಿಖೆಯಲ್ಲಿ ಲೋಪ? ಇಂದು ಬಾಂಬೆ ಹೈಕೋರ್ಟ್‌ ಆದೇಶ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮ್ಮ ಮಗಳ ಸಾವಿನ ತನಿಖೆಯಲ್ಲಿ ಮುಂಬೈ ಪೊಲೀಸರು ಲೋಪ ಎಸಗಿದ್ದಾರೆ ಎಂದು ದಿಶಾ ಸಾಲಿಯಾನ್‌ ತಂದೆ ಸತೀಶ್‌ ಸಾಲಿಯಾನ್ ಆರೋಪಿಸಿದ್ದು, ಇಂದು ಬಾಂಬೆ ಹೈಕೋರ್ಟ್‌ ಆದೇಶ ಪ್ರಕಟಿಸಲಿದೆ.

ಸತೀಶ್‌ ಸಾಲಿಯಾನ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಾರಂಗ್‌ ವಿ. ಕೋತ್ವಾಲ್‌ ಮತ್ತು ನ್ಯಾಯಮೂರ್ತಿ ರಂಜಿತ್‌ಸಿನ್ಹ ರಾಜ ಭೋಸಲೆ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್‌ ಪೀಠ ಇಂದು ಆದೇಶ ಪ್ರಕಟಿಸಲಿದೆ.

ಸತೀಶ್‌ ಸಾಲಿಯಾನ್‌ ಪರ ವಕೀಲ ನೀಲೇಶ್‌ ಓಜಾ ಪ್ರಕರಣದ ಬಗ್ಗೆ ಮತ್ತೊಮ್ಮೆ ತನಿಖೆಯಾಗಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ದಿಶಾ ಸಾಲಿಯಾನ್‌ ಸಾವು ಆಕಸ್ಮಿಕ ಅಲ್ಲ, ಆತ್ಮಹತ್ಯೆ ಅಲ್ಲ. ಇದು ಕೊಲೆ ಎಂದು ಆರೋಪಿಸಲಾಗಿತ್ತು. ಹೀಗಿದ್ದರೂ ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಲ್ಲ. ಕುಟುಂಬದವರು ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯೆಂದು ಆರೋಪಿಸುತ್ತಿದ್ದಾರೆ. ಹೀಗಿರುವಾಗ ಎಫ್‌ಐಆರ್‌ ದಾಖಲಾಗಬೇಕಿತ್ತು. ಆದರೆ ಕೇವಲ ಅಪಘಾತದ ಸಾವಿನ ವರದಿ ಎಂದು ದಾಖಲಾಗಿರುವುದು ಏಕೆ ಎಂದು ಪ್ರಶ್ನಿಸಿದ್ದರು ಎಂದು ಓಜಾ ಪ್ರಶ್ನಿಸಿದ್ದಾರೆ.

ಮೃತರ ಪೋಷಕರು ಠಾಣೆಗೆ ಆಗಮಿಸಿ ನನ್ನ ಮಗಳ ಮೇಲೆ ಗ್ಯಾಂಗ್‌ ರೇಪ್‌ ಆಗಿದೆ, ಆಕೆಯನ್ನು ಮರ್ಡರ್‌ ಮಾಡಿದ್ದಾರೆ ಎಂದು ಹೇಳಿದಾಗ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಬೇಕಿತ್ತು. ಅವರನ್ನು ತಡೆದಿದ್ದು ಯಾರು ಎಂದು ಕೋರ್ಟ್‌ ಪ್ರಶ್ನಿಸಿದೆ. ದಿಶಾ ಸಾಲಿಯಾನ್‌ 14ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನುವುದು ಪೊಲೀಸರ ಥಿಯರಿ. ಆದರೆ ಸಾಕ್ಷ್ಯಗಳು, ವಸ್ತುಗಳು ಹಾಗೂ ರಿಪೋರ್ಟ್‌ಗಳು ಇದು ಆತ್ಮಹತ್ಯೆಯಲ್ಲ ಎಂದು ಹೇಳುತ್ತಿವೆ ಎಂದು ಓಜಾ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !