ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ತಂಬಾಕು ವಿರೋಧಿ ಆರೋಗ್ಯ ಎಚ್ಚರಿಕೆ ಪ್ರದರ್ಶನ ಕಡ್ಡಾಯ: ಕೇಂದ್ರ ಸರಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆಜಾನ್ ಪ್ರೈಮ್ ಮತ್ತು ಹಾಟ್ಸ್ಟಾರ್ನಂತಹ ಒಟಿಟಿ ಪ್ಲಾಟ್ ಫಾರ್ಮ್ ಗಳು ಕಾರ್ಯಕ್ರಮದ ಸಮಯದಲ್ಲಿ ತಂಬಾಕು ಉತ್ಪನ್ನಗಳು ಅಥವಾ ಅವುಗಳ ಬಳಕೆಯನ್ನು ಕುರಿತು ಪ್ರದರ್ಶಿಸುವಾಗ ತಂಬಾಕು ವಿರೋಧಿ ಆರೋಗ್ಯ ಎಚ್ಚರಿಕೆಯನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿ ಆರೋಗ್ಯ ರಾಜ್ಯ ಸಚಿವ ಎಸ್ಪಿ ಸಿಂಗ್ ಬಘೆಲ್, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಸರಬರಾಜು ಮತ್ತು ವಿತರಣೆ) ತಿದ್ದುಪಡಿ ನಿಯಮಗಳು 2023 ನ್ನು ಮೇ 31 ರಂದು ಸರ್ಕಾರ ಹೊರಡಿಸಿರುವುದಾಗಿ ತಿಳಿಸಿದ್ದಾರೆ.

ತಂಬಾಕು ಉತ್ಪನ್ನಗಳನ್ನು ಒಳಗೊಂಡಿರುವ ಯಾವುದೇ ಆನ್ಲೈನ್ ಕಂಟೆಂಟ್ನಲ್ಲಿ ಆರೋಗ್ಯ ಎಚ್ಚರಿಕೆಗಳು ಮತ್ತು ಹಕ್ಕು ನಿರಾಕರಣೆಗಳನ್ನು ಸೇರಿಸಬೇಕು. ಕಾರ್ಯಕ್ರಮದ ಸಮಯದಲ್ಲಿ ತಂಬಾಕು ಉತ್ಪನ್ನಗಳು ಅಥವಾ ಅವುಗಳ ಬಳಕೆಯನ್ನು ಪ್ರದರ್ಶಿಸಿದಾಗ ಒಟಿಟಿ ವೇದಿಕೆಯು ತಂಬಾಕು ವಿರೋಧಿ ಆರೋಗ್ಯ ಎಚ್ಚರಿಕೆಯನ್ನು ಪರದೆಯ ಕೆಳಭಾಗದಲ್ಲಿ ಪ್ರದರ್ಶಿಸಬೇಕು ಎಂದು ಅಧಿಸೂಚನೆಯಲ್ಲಿ ಹೇಳಿದೆ.

ತಂಬಾಕು ಉತ್ಪನ್ನಗಳು ಪ್ರದರ್ಶಿಸುವ ಆನ್ಲೈನ್ ಕಂಟೆಂಟ್ನ ಪ್ರತಿ ಪ್ರಕಾಶಕರು ಕಾರ್ಯಕ್ರಮದ ಪ್ರಾರಂಭ ಹಾಗೂ ಮಧ್ಯದಲ್ಲಿ ಕನಿಷ್ಠ 30 ಸೆಕೆಂಡ್ಗಳ ಕಾಲ ತಂಬಾಕು ವಿರೋಧಿ ಎಚ್ಚರಿಕೆಗಳನ್ನು ಪ್ರದರ್ಶಿಸಬೇಕು. ತಂಬಾಕು ಉತ್ಪನ್ನಗಳ ಪ್ರದರ್ಶನ ಅಥವಾ ಅವುಗಳ ಬಳಕೆಯ ಅವಧಿಯಲ್ಲಿ ಪರದೆಯ ಕೆಳಭಾಗದಲ್ಲಿ ಕನಿಷ್ಠ 20 ಸೆಕೆಂಡುಗಳ ಕಾಲ ತಂಬಾಕಿನ ದುಷ್ಪರಿಣಾಮಗಳ ಕುರಿತು ಧ್ವನಿ-ದೃಶ್ಯಗಳೊಂದಿಗೆ ಪ್ರದರ್ಶಿಸಬೇಕು ಎಂದು ಬಾಘೆಲ್ ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳನ್ನು ಒಳಗೊಂಡಿರುವ ಅಂತರ-ಸಚಿವಾಲಯ ಸಮಿತಿಯ ಮೂಲಕ 2023 ರ ತಿದ್ದುಪಡಿ ನಿಯಮಗಳ ನಿಯಮ (6) ರ ಪ್ರಕಾರ ಎಲ್ಲಾ ಅನುಸರಣೆಗಳನ್ನು ಖಾತ್ರಿಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!