ಹೊಸದಿಗಂತ ವರದಿ ಚಿತ್ರದುರ್ಗ:
ಹಿಂದೂ ಮಹಾಗಣಪತಿ ಶೋಭಯಾತ್ರೆ ವೇಳೆ ನಾಥೂರಾಮ್ ಗೋಡ್ಸೆ ಭಾವಚಿತ್ರ ಪ್ರದರ್ಶನ ಮಾಡಿರುವ ಬಗ್ಗೆ ಚಿತ್ರದುರ್ಗ ನಗರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಗೋಡ್ಸೆ ಫೋಟೋ ಪ್ರದರ್ಶನ ಮಾಡಿದ ಅಪರಿಚಿತರ ವಿರುದ್ದ FIR ದಾಖಲಿಸಲಾಗಿದೆ. ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ನಿವಾಸಿ ಹನುಮಂತಪ್ಪ ಎಂಬುವವರಿಂದ ದೂರು ನೀಡಿದ್ದಾರೆ.
ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವ ಸಲುವಾಗಿ ಫೋಟೋ ಪ್ರದರ್ಶನ ಮಾಡಿದ್ದಾರೆ. ಶಾಂತಿ ಕದಡಲು, ಕೋಮುಗಳ ಮಧ್ಯೆ ಸೌಹಾರ್ಧತೆಗೆ ಧಕ್ಕೆ ತರಲು ಫೋಟೋ ಪ್ರದರ್ಶನ ಮಾಡಿಡಲಾಗಿದೆ. ಗೋಡ್ಸೆ ಫೋಟೋಗಳನ್ನು ಪ್ರದರ್ಶಿಸಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.