ದಿಗಂತ ವರದಿ ಸೋಮವಾರಪೇಟೆ:
ಧಾರ್ಮಿಕ ದತ್ತಿ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ತಾಲೂಕಿನ ವಿವಿಧ ದೇವಾಲಯಗಳಿಗೆ ಗಂಗಾಜಲ ವಿತರಿಸಲಾಯಿತು.
ತಾಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್ ಗೋವಿಂದರಾಜು ಅವರು ವಿವಿಧ ದೇವಾಲಯಗಳಿಗೆ ಗಂಗಾಜಲವನ್ನು ಸಾಂಕೇತಿಕವಾಗಿ ವಿತರಿಸಿದರು.
ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಮಹಾಶಿವರಾತ್ರಿ ಅಂಗವಾಗಿ ಪರಶಿವನಿಗೆ ಅಭಿಷೇಕ ಮಾಡಲು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಕಂದಾಯ ಇಲಾಖೆ ಮೂಲಕ ರಾಜ್ಯದ ದೇವಾಲಯಗಳಿಗೆ ಗಂಗಾಜಲ ವಿತರಣೆ ಮಾಡಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಗಂಗಾಜಲ ವಿತರಣೆ ಸಂದರ್ಭ ಕಂದಾಯ ಇಲಾಖೆ ಸಿಬ್ಬಂದಿಗಳಾದ ಲೋಹಿತ್ ಕುಮಾರ್, ಪಳಂಗಪ್ಪ, ಪ್ರಹ್ಲಾದ್, ಮನುಕುಮಾರ್, ದಾಮೋದರ್, ಸತೀಶ್ ಮುಂತಾದವರು ಹಾಜರಿದ್ದರು.