ಬೇಲೂರು ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಪಠಣ ವಿವಾದ : ಗೊಂದಲಕ್ಕೆ ತೆರೆ ಎಳೆದ ಜಿಲ್ಲಾಡಳಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೇಲೂರಿನ ಶ್ರೀ ಚನ್ನಕೇಶವ ರಥೋತ್ಸವದ ವೇಳೆ ಕುರಾನ್ ಪಠಣ ಮಾಡದಂತೆ ಇತ್ತೀಚೆಗೆ ಜಿಲ್ಲಾ ವಿವಿಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದು, ಈ ಗೊಂದಲಕ್ಕೆ ಹಾಸನ ಜಿಲ್ಲಾಡಳಿತ ಇಂದು ತೆರೆ ಎಳೆದಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಶ್ರೀ ಚನ್ನಕೇಶವ ರಥೋತ್ಸವದಲ್ಲಿ ಕುರಾನ್ ಪಠಣ ಇದು ಹೊಸದಾಗಿ ಕಾರ್ಯರೂಪಕ್ಕೆ ತಂದಿರುವುದಲ್ಲ, 1929 ರಿಂದ ಈ ಪದ್ದತಿ ಚಾಲ್ತಿಯಲ್ಲಿದೆ. ರಥೋತ್ಸವ ಆಚರಣೆ ಪದ್ಧತಿಯಲ್ಲಿ ಅದು ಕೂಡ ಸೇರಿದೆ. ರಥೋತ್ಸವದ ದಿನ ಮೌಲ್ವಿಗಳು ಬಂದು ಮುಜ್ರೆ ಸರ್ವಿಸ್ ಅಂತಾ ಮಾಡುತ್ತಾರೆ ಅದು 1929 ರಿಂದ ನಡೆದುಕೊಂಡು ಬಂದಿದೆ, ಇಷ್ಟು ವರ್ಷದಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ನಮ್ಮ ಸ್ವಂತ ವಿವೇಚನೆಯಿಂದ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನು ಏಪ್ರಿಲ್‌ 4 ಮತ್ತು ಏಪ್ರಿಲ್‌ ‌5ರಂದು ಬೇಲೂರಿನ ಶ್ರೀ ಚನ್ನಕೇಶವ ರಥೋತ್ಸವ ನಡೆಯಲಿದ್ದು, ಹಾಸನ ಜಿಲ್ಲಾಡಳಿತ ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!