ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನಟ ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿಗೆ ಡಿವೋರ್ಸ್ ಕೊಡ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ. ಈ ಬಗ್ಗೆ ಸ್ವತಃ ಪವನ್ ಕಲ್ಯಾಣ್ ಮಾತನಾಡಿದ್ದಾರೆ.
ಮೂರನೇ ಪತ್ನಿ ಅನ್ನಾ ಲೇಜ್ನೇವಾರಿ ಜೊತೆ ಸಮಸ್ಯೆಗಳಾಗಿದ್ದು, ಡಿವೋರ್ಸ್ ನೀಡ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಮೊದಲು ನಂದಿನಿ ಎನ್ನುವವರ ಜೊತೆ ಪವನ್ ಮದುವೆಯಾಗಿದ್ದರು, ನಂತರ ನಟಿ ರೇಣು ದೇಸಾಯಿ ಎನ್ನುವವರನ್ನು ಮದುವೆ ಆಗಿದ್ದರು, ಇವರ ಜೊತೆ ಇಬ್ಬರು ಮಕ್ಕಳು ಇದ್ದಾರೆ.
ನಂತರ ರಷ್ಯಾ ಮೂಲದ ಅನ್ನಾರನ್ನು ವರಿಸಿದ್ದರು. ಇತ್ತೀಚೆಗೆ ಎಲ್ಲ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿಯೂ ಪವನ್ ಒಬ್ಬರೇ ಬಂದಿದ್ದರು, ಹಾಗಾಗಿ ಮತ್ತೆ ಡಿವೋರ್ಸ್ ಆಯ್ತಾ ಅನ್ನುವ ಅನುಮಾನ ಅಭಿಮಾನಿಗಳನ್ನು ಕಾಡಿತ್ತು, ಆದರೆ ಪವನ್ ಇದಕ್ಕೆ ಫೋಟೊ ಮೂಲಕ ಉತ್ತರ ನೀಡಿದ್ದು, ಇಬ್ಬರೂ ಇನ್ನೂ ಜೊತೆಯಲ್ಲಿಯೇ ಇದ್ದೇವೆ ಎಂದು ಹೇಳಿಕೊಂಡಿದ್ದಾರೆ.