ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೇರಿಕಾದಲ್ಲಿರುವ ಪತಿ ಬೆಂಗಳೂರಿನಲ್ಲಿರುವ ಪತ್ನಿಗೆ ವಿಚ್ಛೇದನಕ್ಕೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ ಪತಿ ಭೌತಿಕ ಹಾಜರಿಗಾಗಿ ಪತ್ನಿ ಕೋರ್ಟ್ಗೆ ಮನವಿ ಮಾಡಿದ್ದರು. ಬೆಂಗಳೂರು ನ್ಯಾಯಾಲಯ ಪ್ರಯಾಣ ವೆಚ್ಚವನ್ನು ನೀವೇ ಭರಿಸಬೇಕು ಎಂದು ಆದೇಶಿಸಿದ್ದು, ಆದರೆ ಈ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಈ ವೇಳೆ ಪತಿಯೇ ವೆಚ್ಚ ಭರಿಸಿಕೊಂಡು ಬರುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಮಾಡಿದ ಬೆಂಗಳೂರಿನಲ್ಲಿರುವ ಪತ್ನಿ, ಅಮೇರಿಕಾದಲ್ಲಿರುವ ತನ್ನ ಪತಿ ಪಾಟೀಸವಾಲಿಗೆ ನೇರವಾಗಿ (ಭೌತಿಕ) ಹಾಜರಿ ಆಗಬೇಕು ಎಂದು ಕೋರ್ಟ್ ಮುಂದೆ ಮನವಿ ಸಲ್ಲಿಕೆ ಮಾಡಿದ್ದಾರೆ. ಆದರೆ, ನ್ಯಾಯಾಲಯವು ನಿಮ್ಮ ಪತಿ ಅಮೇರಿಕಾದಿಂದ ಇಲ್ಲಿಗೆ ಬಂದು ಹೋಗಲು ಆಗುವ 1.65 ಲಕ್ಷ ರೂ. ಪ್ರಯಾಣ ವೆಚ್ಚವನ್ನು ಭರಿಸುವಂತೆ ಪತ್ನಿಗೆ ನಿರ್ದೇಶನ ನೀಡಿತ್ತು. ಇಷ್ಟೊಂದು ದುಬಾರಿ ವೆಚ್ಚವನ್ನು ಪಾವತಿಸಲಾಗದೇ ಪತ್ನಿ ಕಂಗಾಲಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ಈ ಅರ್ಜಿ ವಿಚಾರಣೆ ಮಾಡಿದಾಗ ಪತ್ನಿಯ ಮನವಿಯನ್ನು ಪುರಸ್ಕಾರ ಮಾಡಲಾಗಿದೆ. ವಿವಾಹ ವಿಚ್ಛೇದನಕ್ಕೆ ಅಮೇರಿಕಾದಿಂದಲೇ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನು ಪತ್ನಿಯು ಪತಿಯ ಭೌತಿಕ ಹಾಜರಿ ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅಮೇರಿಕಾದಲ್ಲಿರುವ ಪತಿ ಬಡವನೇನೂ ಅಲ್ಲದ್ದರಿಂದ, ಪತ್ನಿಯೇ ಪ್ರಯಾಣ ವೆಚ್ಚವನ್ನು ಭರಿಸಬೇಕೆಂಬ ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶವನ್ನು ರದ್ದುಗೊಳಿಸಿದೆ.