ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಯುವ ಸೆನ್ಸೇಷನ್ ದಿವ್ಯಾ ದೇಶಮುಖ್ ಮಹಿಳಾ ವಿಶ್ವಕಪ್ 2025ರ ಮಹಿಳಾ ಚೆಸ್ ವಿಶ್ವಕಪ್ ಗೆದ್ದಿದ್ದಾರೆ.
ಬಟುಮಿಯಲ್ಲಿ ಇಂದು ನಡೆದ ಟೈ-ಬ್ರೇಕ್‌ಗಳಲ್ಲಿ ಕೊನೆರು ಹಂಪಿ ಅವರನ್ನು 2.5-1.5 ಅಂಕಗಳಿಂದ ಸೋಲಿಸಿ, ಮಹಿಳಾ ವಿಶ್ವಕಪ್ 2025 ಅನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ದಿವ್ಯಾ ಇತಿಹಾಸ ಸೃಷ್ಟಿಸಿದ್ದಾರೆ.
ಈ ಗೆಲುವಿನೊಂದಿಗೆ, ದಿವ್ಯಾ ವಿಶ್ವಕಪ್ ಕಿರೀಟವನ್ನು ಪಡೆದುಕೊಂಡರು ಮಾತ್ರವಲ್ಲದೆ, ಅಧಿಕೃತವಾಗಿ ಭಾರತದ 88 ನೇ ಗ್ರ್ಯಾಂಡ್‌ಮಾಸ್ಟರ್ ಆದರು.
ಫೈನಲ್‌ನಲ್ಲಿ ಎರಡು ಪಂದ್ಯಗಳ ನಂತರ ತಲಾ 1-1 ರಲ್ಲಿ ಸಮಬಲದಲ್ಲಿದ್ದ ಭಾರತೀಯ ಆಟಗಾರ್ತಿಯರು, ಅಂತಿಮ ವಿಜೇತರನ್ನು ನಿರ್ಧರಿಸಲು ಸೋಮವಾರ ಟೈ-ಬ್ರೇಕ್‌ಗಳನ್ನು ಪ್ರವೇಶಿಸಿದರು.
ಅದರಂತೆ ನಡೆದ ಫೈನಲ್ ಪಂದ್ಯದಲ್ಲಿ ಕೊನೆರು ಹಂಪಿ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿದ್ದರೂ, ಯುವ ಆಟಗಾರ್ತಿಯ ಮುಂದೆ ಅನುಭವಿ ಕೊನೆರು ಹಂಪಿ ಅವರು ಸೋಲೊಪ್ಪಿಕೊಳ್ಳಬೇಕಾಯಿತು. ಕ್ಲಾಸಿಕ್ ಸ್ವರೂಪದಲ್ಲಿ ನಡೆದಿದ್ದ ಫೈನಲ್‌ನ ಮೊದಲ ಎರಡು ಪಂದ್ಯಗಳು ಡ್ರಾ ಗೊಂಡಿದ್ದರೆ, ರ್ಯಾಪಿಡ್ ಸ್ವರೂಪದಲ್ಲಿ ನಡೆದ ಟೈ-ಬ್ರೇಕ್ನಲ್ಲಿ ದಿವ್ಯಾ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.