ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಬೆಳಕಿನ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು, ಹಲವು ದೇಶಗಳ ವಿಶ್ವ ನಾಯಕರು ಭಾರತೀಯರಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ.
ಅಮೆರಿಕದ ಶ್ವೇತಭವನವು ದೀಪಾವಳಿಯು ಕತ್ತಲೆ ಮೇಲೆ ಬೆಳಕಿನ ವಿಜಯ ಎಂದು ಕರೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಎಲ್ಲ ಅಮೆರಿಕನ್ನರಿಗೆ ಶುಭಾಶಯ ಕೋರಿದ್ದು, ಈ ಹಬ್ಬವು ಪ್ರತಿಯೊಬ್ಬರಿಗೂ ಶಾಂತಿ, ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ.
ಇದೇ ವೇಳೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ, ಶುಭ ಕೋರಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಭಾಶಯ ಕೋರಿದ್ದು, ನನ್ನ ಸೇಹಿತ ನರೇಂದ್ರ ಮೋದಿ ಹಾಗೂ ಭಾರತೀಯ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಬೆಳಕಿನ ಹಬ್ಬವು ನಿಮ್ಮ ಮಹಾನ್ ದೇಶಕ್ಕೆ ಭರವಸೆ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹೇಳಿದ್ದಾರೆ. ಜೊತೆಗೆ ಇಸ್ರೇಲ್ ಮತ್ತು ಭಾರತ ಸದಾ ಒಗ್ಗಟ್ಟಾಗಿ ನಿಲ್ಲುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇವರಲ್ಲದೆ, ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ, ಭಾರತದಲ್ಲಿರುವ ಯುಎಇ ರಾಯಭಾರಿ ಅಬ್ದುಲ್ ನಾಸೆರ್ ಅಲ್ ಶಾಲಿ ಅವರು ಕೂಡ ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
ದೇಶಾದ್ಯಂತ ಸಂಭ್ರಮದ ದೀಪಾವಳಿ ಆಚರಣೆ: ಭಾರತೀಯರಿಗೆ ವಿಶ್ವ ನಾಯಕರುಗಳಿಂದ ಹರಿದುಬಂತು ಹಬ್ಬದ ಶುಭಾಶಯ!

