ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ನಡೆದ ಐಟಿ ದಾಳಿ ವೇಳೆ ಕೋಟ್ಯಂತರ ರೂಪಾಯಿ ಪತ್ತೆಯಾಗಿದ್ದು, ಈ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ.
ರಾಜ್ಯದಲ್ಲಿ ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್ ಆಯ್ತು(YST), ಈಗ ಡಿಕೆ ಸುರೇಶ್, ಡಿಕೆ ಶಿವಕುಮಾರ್(SST) ಟ್ಯಾಕ್ಸ್ ಕಲೆಕ್ಷನ್ ಆರಂಭವಾಗಿದೆ ಎಂದು ಟಾಂಗ್ ನೀಡಿದ್ದಾರೆ.
ಈ ಹಣ ಎಸ್‌ಎಸ್‌ಟಿ ಟ್ಯಾಕ್ಸ್‌ಗೆ ಸೇರಿದ್ದು, ಈ ಬಗ್ಗೆ ಸಿಎಂ ಪ್ರಾಮಾಣಿಕವಾಗಿ ತನಿಖೆ ನಡೆಸಲಿ ನೋಡೋಣ, ಭ್ರಷ್ಟಾಚಾರ ಮಾಡಿ ದೇವರ ಪ್ರಾರ್ಥನೆ ಮಾಡಿದ್ರೆ ದೇವರು ಕ್ಷಮಿಸೋದಿಲ್ಲ, ಲೂಟಿ ಮಾಡಿದ್ದು ನಿಜವೇ ಆದ್ರೆ ತಿಹಾರ ಜೈಲು ಕಡ್ಡಾಯ ಎಂದಿದ್ದಾರೆ.