ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಮ್ಮೆ ಪರೋಕ್ಷವಾಗಿ ಸಿಎಂ ಸ್ಥಾನ ಆಸೆಯನ್ನು ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ ಸಿಎಂ ಸ್ಥಾನಕ್ಕೆ ನನ್ನನ್ನ ಕೂರಿಸಿ ಎಂಬ ಪರೋಕ್ಷ ಸಂದೇಶವನ್ನು ಕಳುಹಿಸಿದ್ದಾರೆ.
ಅರಮನೆ ಮೈದಾನದಲ್ಲಿ KPTCL ನೌಕರರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದ ವೇಳೆ ಡಿಕೆ ಶಿವಕುಮಾರ್ ಭಾಷಣ ಮಾಡಲು ಬಂದ ಕೂಡಲೇ ವಿದ್ಯುತ್ ಇಲಾಖೆ ಸಿಬ್ಬಂದಿಗಳು, ನೌಕರರು ಡಿಕೆ ಡಿಕೆ ಅಂತ ಘೋಷಣೆ ಕೂಗಿದರು. ಈ ವೇಳೆ ಮಾತಾನಾಡಿದ ಡಿಕೆ ಶಿ ಡಿಕೆ ಡಿಕೆ ಅನ್ನೋದು ಅಲ್ಲ. ಎಲೆಕ್ಷನ್ ನಲ್ಲಿ ಇನ್ನೊಂದು ಸಾರಿ ಡಿಕೆ ಶಿವಕುಮಾರ್ ತಂದು ಕೂರಿಸಿದ ಮೇಲೆ ಈ ಘೋಷಣೆ ಕೂಗಿ ಎಂದರು.
ನೀವು ಮನಸ್ಸು ಮಾಡಿದ್ರೆ ಡಿಕೆ ಶಿವಕುಮಾರ್‌ನನ್ನು ಮೇಲಕ್ಕೆ ಎತ್ತಬಹುದು. ಕೆಳಗೆ ಇಳಿಸಬಹುದು. ಅಷ್ಟು ಶಕ್ತಿ ನಿಮಗೆ ಇದೆ. ಬರೀ ಡಿಕೆ ಡಿಕೆ ಅನ್ನೋದಲ್ಲ. ಈ ಸರ್ಕಾರವನ್ನು ತಂದು ಕೂರಿಸಬೇಕು ಎನ್ನುವ ಮೂಲಕ ಸಿಎಂ ಸ್ಥಾನಕ್ಕೆ ಆಶೀರ್ವಾದ ಮಾಡಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ.