October 12, 2026
Monday, October 12, 2026
spot_img

ರಾಯಲ್‌ ಹುಡುಗರ ಆಟಕ್ಕೆ ಮನಸೋತ ಡಿಕೆಶಿ, ಸಿದ್ದರಾಮಯ್ಯ! ಬೆಂಗಳೂರಿನ ಹೆಮ್ಮೆ ಆರ್‌ಸಿಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ರಿಕೆಟ್‌ ಪ್ರೇಮಿಗಳ ಕನಸು ಮತ್ತೊಮ್ಮೆ ನನಸಾಗಿದೆ. ಈ ಬಾರಿ ಕೂಡ ಕಪ್‌ ನಮ್ಗೇ ಸಿಗಬೇಕು ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮ್ಯಾಚ್‌ ನೋಡಿದವರಿಗೆ ತೃಪ್ತಿ ಸಿಕ್ಕಿದೆ.

ನಿನ್ನೆ ನಡೆದ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗುಜರಾತ್‌ ಟೈಟನ್ಸ್‌ ವಿರುದ್ಧ ಗೆದ್ದು ಮತ್ತೊಮ್ಮೆ ಚಾಂಪಿಯನ್‌ ಆಗಿದೆ. ಈ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್‌ ಹಂಚಿಕೊಂಡಿದ್ದಾರೆ.

ರಾಜ್ಯದ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಹಂಗಾಮಿ ಸಿಎಂ ಸಿದ್ದರಾಮಯ್ಯ ಆರ್‌ಸಿಬಿಗೆ ಕಂಗ್ರಾಟ್ಸ್‌ ಹೇಳಿದ್ದಾರೆ. ಈ ಬಾರಿ ಕೂಡ ಕಪ್‌ ನಮ್ದೇ, ಆರ್‌ಸಿಬಿ ನಮ್ಮ ಕರ್ನಾಟಕದ ಹೆಮ್ಮೆ. ನಿಮ್ಮ ಧೈರ್ಯ, ಸಂಯಮದಿಂದ ಟೀಂನ್ನು ಗೆಲ್ಲಿಸಿದ್ದೀರಿ. ಫೈನಲ್‌ ಪಂದ್ಯ ಬೆಂಗಳೂರಿನಲ್ಲಿ ಇದ್ದಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು ಎಂದು ಡಿಕೆಶಿ ಹೇಳಿದ್ದಾರೆ.

ಇತ್ತ ಸಿದ್ದರಾಮಯ್ಯ ಕೂಡ ರಾಯಲ್‌ ಹುಡುಗರ ಆಟವನ್ನು ಹಾಡಿ ಹೊಗಳಿದ್ದಾರೆ.ಈ ಹುಡುಗರ ಆಟದ ಆರ್ಭಟಕ್ಕೆ ಯಾರಿಗೆ ತಾನೆ ಭಯೋ ಆಗೋದಿಲ್ಲ. ಎರಡು ಬಾರಿ ಕಪ್‌ ಎತ್ತಿದ್ದೀರಿ.ಸತತ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿದ ನಮ್ಮ ಆರ್‌ಸಿಬಿಗೆ ಅಭಿನಂದನೆಗಳು. ಒಗ್ಗಟ್ಟಿನ ತಂಡದ ಪ್ರಯತ್ನದ ಮೂಲಕ ಗಳಿಸಿದ ಗೆಲುವು ಎಲ್ಲೆಡೆ ಆರ್‌ಸಿಬಿ ಅಭಿಮಾನಿಗಳ ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.

Must Read