October 12, 2026
Monday, October 12, 2026
spot_img

ಇಂದು ಮಧ್ಯಾಹ್ನ ದೆಹಲಿಗೆ ತೆರಳಲಿದ್ದಾರೆ ಡಿ.ಕೆ. ಶಿವಕುಮಾರ್‌, ಮನೆ ಮುಂದೆ ಅಭಿಮಾನಿಗಳ ದೌಡು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹಾಗೂ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ತೆರಳಲಿದ್ದಾರೆ.

ಕಾಂಗ್ರೆಸ್‌ ಮೂಲಗಳಿಂದ ಮಾಹಿತಿ ದೊರಕಿದ್ದು, ದೆಹಲಿಯಲ್ಲಿ ಹೊಸ ಸಚಿವ ಸಂಪುಟ ಅಂತಿಮವಾಗಲಿದೆ. ದೆಹಲಿಗೆ ತೆರಳೋಕೆ ತಯಾರಾಗಿರುವ ಡಿಕೆಶಿ ಅವರ ಮನೆಯ ಮುಂದೆ ನೂರಾರು ಅಭಿಮಾನಿಗಳು ನೆರೆದಿದ್ದಾರೆ.

ಮನೆ ಮುಂದೆ ನಿಂತಿದ್ದ ಅಭಿಮಾನಿಗಳನ್ನು ಡಿಕೆಶಿ ತಮ್ಮ ಮನೆಯ ಬಾಲ್ಕನಿಯಿಂದ ಮಾತನಾಡಿಸಿದ್ದಾರೆ. ಅವರ ಪ್ರಯಾಣದ ವಿವರಗಳ ಪ್ರಕಾರ, ಇಬ್ಬರೂ ನಾಯಕರು ಮಧ್ಯಾಹ್ನದ ವೇಳೆಗೆ ದೆಹಲಿ ತಲುಪಲಿದ್ದಾರೆ. ನಂತರ ಅವರು ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿ. ಕೆ. ಶಿವಕುಮಾರ್ ಅವರು, ಜೂನ್ 3 ರಂದು ಸಂಜೆ 4:05ಕ್ಕೆ ಲೋಕ ಭವನದ ಆವರಣದಲ್ಲಿ ಕೆಲವು ಸಚಿವರೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Must Read