ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೃಂಗೇರಿ ಶಾರದಾಂಬೆ ದೇಗುಲಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಈ ವೇಳೆ ದೇಗುಲದ ಗೋಡೆ ಮೇಲಿರುವ ಕಾರ್ತ ವೀರ್ಯಾರ್ಜುನನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅಧಿಕಾರ ಹಾಗೂ ಶತೃ ಸಂಹಾರಕ್ಕಾಗಿ ಕಾರ್ತ ವೀರ್ಯಾರ್ಜುನನಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಅಲ್ಲದೇ ಕಳೆದು ಹೋದ ವಸ್ತುವಿಗಾಗಿ ಇಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಇದೀಗ ಮೊದಲ ಬಾರಿಗೆ ಡಿಕೆಶಿ ಕಾರ್ತ ವೀರ್ಯಾರ್ಜುನನಿಗೆ ಪೂಜೆ ಸಲ್ಲಿಸಿದ್ದಾರೆ.
ಶೃಂಗೇರಿ ಮಠದ ಆವರಣದ ನವಗ್ರಹ ಆಕಾರದ ದೇವಾಲಯದ ಗೋಡೆ ಮೇಲೆ ಕಾರ್ತ ವೀರ್ಯಾರ್ಜುನ ಕೆತ್ತನಿ ಇದೆ.