ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣದಲ್ಲಿ ಇಂದು ಕಾಂಗ್ರೆಸ್ ನಾಯಕರು ಮತದಾರರಿಗೆ ಧನ್ಯವಾದ ತಿಳಿಸಲು ಕೃತಜ್ಞತಾ ಸಮಾವೇಶ ಆಯೋಜಿಸಿದ್ದರು.
ಸಮಾವೇಶ ಮುಗಿದ ಬಳಿಕ ಕಾಂಗ್ರೆಸ್ ನಾಯಕರು ಚನ್ನಪಟ್ಟಣ ತಾಲೂಕಿನಲ್ಲಿರುವ ಕಣ್ವ ಜಲಾಶಯಕ್ಕೆ ಭೇಟಿ ನೀಡಿದರು. ಕಣ್ವ ಜಲಾಶಯದ ಸೌಂದರ್ಯ ನೋಡಿದ ನಾಯಕರು ಜಾಲಿ ರೈಡ್ ಮಾಡಲು ಹೊರಟರು.
ಒಂದೇ ಬೋಟ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಶಾಸಕರಾದ ಬಾಲಕೃಷ್ಣ, ಕದಲೂರು ಉದಯ್, ಶ್ರೀನಿವಾಸ್ ಹಾಗೂ ಎಂಎಲ್ಸಿ ರವಿ ಅವರು ರೈಡ್ ಹೋಗಿದ್ದರು. ಮತ್ತೊಂದೆಡೆ ಮಾಜಿ ಸಂಸದ ಡಿ.ಕೆ ಸುರೇಶ್ ಹಾಗೂ ಶಾಸಕ ಸಿ.ಪಿ ಯೋಗೇಶ್ವರ್ ಇಬ್ಬರೇ ವಾಟರ್ ಬೈಕ್ ಹತ್ತಿ ಒಂದು ರೌಂಡ್ ಜಾಲಿ ರೈಡ್ ಹೋದರು.
ವಾಟರ್ ಬೈಕ್‌ನಲ್ಲಿ ಶಾಸಕ ಸಿ.ಪಿ ಯೋಗೇಶ್ವರ್ ಅವರು ಡಿ.ಕೆ.ಸುರೇಶ್ ಅವರನ್ನ ಗಟ್ಟಿಯಾಗಿ ಹಿಡಿದು ಕೂತಿದ್ದರು. ವಾಟರ್ ಬೈಕ್ ರೈಡ್ ವೇಳೆ ಡಿ.ಕೆ ಸುರೇಶ್, ಸಿಪಿವೈ ಇಬ್ಬರು ಆಯತಪ್ಪಿ ನೀರಿಗೆ ಬಿದ್ದರು.
ಒಂದೇ ವಾಟರ್ ಬೈಕ್‌ನಲ್ಲಿ ನಾಯಕರು ರೈಡ್ ಮಾಡಿದ್ದರು. ಈ ವೇಳೆ ಆಯತಪ್ಪಿ ವಾಟರ್ ಬೈಕ್‌ನಿಂದ ಇಬ್ಬರು ಕೆಳಗೆ ಬಿದ್ದು ಬಳಿಕ ನೀರಿನಲ್ಲಿ ಈಜಿ ದಡ ಸೇರಿದ್ದಾರೆ. ಸೇಫ್ಟಿ ಜಾಕೆಟ್ ಹಾಗೂ ದಡದ ಸಮೀಪವೇ ಡಿ.ಕೆ ಸುರೇಶ್, ಸಿಪಿವೈ ನೀರಿಗೆ ಬಿದ್ದಿದ್ದರಿಂದ ಯಾರು ಹೆದರುವ ಪ್ರಮೇಯವೇ ಬರಲಿಲ್ಲ.