Monday, October 27, 2025

ಮಂತ್ರಾಲಯದಲ್ಲಿ ರಾಯರಿಗೆ ತುಲಾಭಾರ ಸೇವೆ ಮಾಡಿದ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಟೆಂಪಲ್ ರನ್ ಮುಂದುವರಿಸಿದ್ದು, ಮಂತ್ರಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ರಾಯರ ಅನುಗ್ರಹಕ್ಕಾಗಿ ವಿಶೇಷ ಸೇವೆ ಸಲ್ಲಿಸಿದರು. ಶ್ರೀಮಠದ ಅರ್ಚಕರ ನೇತೃತ್ವದಲ್ಲಿ ಅವರಿಗೆ ತುಲಾಭಾರ ಸೇವೆಯನ್ನು ನೆರವೇರಿಸಲಾಯಿತು. ಮಠದ ತುಲಾಭಾರ ಮಂಟಪದಲ್ಲಿ ಒಂದು ಕಡೆ ಡಿಕೆ ಶಿವಕುಮಾರ್ ಕುಳಿತು, ಮತ್ತೊಂದು ಕಡೆ ಬೆಲ್ಲವನ್ನು ಇಟ್ಟು ತುಲಾಭಾರ ಮಾಡಲಾಯಿತು. ಡಿಕೆಶಿ ಅವರು ಭಕ್ತಿಪೂರ್ವಕವಾಗಿ ರಾಯರ ಆಶೀರ್ವಾದ ಪಡೆದರು.

error: Content is protected !!