ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮೆಟ್ರೋ ಸದಾ ಒಂದಿಲ್ಲೊಂದು ವಿಚಾರದಲ್ಲಿ ವಿವಾದಗಳ ಕೇಂದ್ರಬಿಂದುವಾಗಿದೆ. ನೃತ್ಯ, ಸ್ಟಂಟ್ಸ್ ಎಲ್ಲದರ ಬಳಿಕ ಇದೀಗ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಮೆಟ್ರೋ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಮೆಟ್ರೋ ಪ್ರಯಾಣವು ವಿವಿಧ ಘಟನೆಗಳ ಮೂಲಕ ಸಾಗುತ್ತಿದೆ, ಕೆಲವು ವಿನೋದ, ಕೆಲವು ಪ್ರಭಾವಶಾಲಿ, ಕೆಲವು ವಿವಾದಾತ್ಮಕ ಹೀಗೆ..ಹೊಸದಾಗಿ ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಿರುವ ದೃಶ್ಯ ಎಲ್ಲರ ಮನಸನ್ನು ಕದಲಿಸಿದೆ. ಟ್ವಿಟರ್ ಬಳಕೆದಾರರು @writerindenial ‘ಮೆಟ್ರೋದಲ್ಲಿ ಇಂತಹ ಘಟನೆ ನಡೆದಿದ್ದು ಯಾವಾಗ?.. ಮೆಟ್ರೋ ಕೋಚ್‌ನಲ್ಲಿ ಭಿಕ್ಷೆ ಬೇಡುತ್ತಿರುವ ಅಂಗವಿಕಲ ವ್ಯಕ್ತಿ’ ಎಂಬ ಶೀರ್ಷಿಕೆಯೊಂದಿಗೆ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ವೀಡಿಯೊವನ್ನು ಟ್ಯಾಗ್ ಮಾಡಿದ್ದಾರೆ.
ಈ ಟ್ವೀಟ್‌ಗೆ ದೆಹಲಿ ಮೆಟ್ರೋ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಅವರು ವೀಡಿಯೊವನ್ನು ರೀಟ್ವೀಟ್ ಮಾಡಿ ಘಟನೆಯ ವಿವರ, ಕೋಚ್ ಸಂಖ್ಯೆ ಸೇರಿದಂತೆ ಮತ್ತಷ್ಟು ವಿವರಗಳನ್ನು ಕೇಳಿದರು.