ದಿನಂಪ್ರತಿ ಬಳಸುವ ವಾಟರ್ ಬಾಟಲ್‌ಗಳು ಅಥವಾ ಫ್ಲಾಸ್ಕ್‌ಗಳಲ್ಲಿ ಕೆಲವೊಮ್ಮೆ ಕೆಟ್ಟ ವಾಸನೆ ಬರುತ್ತದೆ. ಇದು ಬಳಸಿದ ನೀರಿನಲ್ಲಿ ಬಾಕಿ ಉಳಿದಿರಬಹುದಾದ ಬ್ಯಾಕ್ಟೀರಿಯಾ ಅಥವಾ ಫ್ಲಾಸ್ಕ್‌ನಲ್ಲಿ ಶುಚಿತ್ವದ ಕೊರತೆಯಿಂದ ಉಂಟಾಗಿರಬಹುದು. ಇಂಥ ಸಂದರ್ಭದಲ್ಲೂ ಬಾಟಲನ್ನು ಎಷ್ಟು ಬಾರಿ ತೊಳೆಯುತ್ತಿದ್ದರೂ ವಾಸನೆ ಹೋಗದಂತೆ ಅನಿಸುತ್ತೆ. ಹಾಗಾದರೆ ಇಲ್ಲಿದೆ 4 ಸರಳ ವಿಧಾನಗಳು ಮನೆಯಲ್ಲೇ ಟ್ರೈ ಮಾಡಬಹುದು
ಬೇಕಿಂಗ್ ಸೋಡಾ ಮತ್ತು ಬೆಳ್ಳುಳ್ಳಿ:
ಬಾಟಲಿಗೆ ಒಂದು ಟೀ ಸ್ಪೂನ್ ಬೇಕಿಂಗ್ ಸೋಡಾ ಹಾಕಿ, ಅರ್ಧ ಲೋಟ ನೀರು ಸೇರಿಸಿ ಚೆನ್ನಾಗಿ ಕುಲುಕಿಸಿ. ಈ ಮಿಶ್ರಣದ ಜೊತೆ ಬೆಳ್ಳುಳ್ಳಿ ತುಂಡು ಸೇರಿಸಿದರೆ ಬ್ಯಾಕ್ಟೀರಿಯಾ ವಾಸನೆ ತಕ್ಷಣ ಕಡಿಮೆಯಾಗುತ್ತದೆ.
ಬಿಸಿ ನೀರು ಮತ್ತು ನಿಂಬೆ ರಸ:
ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಅರ್ಧ ನಿಂಬೆ ರಸ ಹಿಂಡಿ ಬಾಟಲಿಗೆ ಹಾಕಿ ಶೇಕ್ ಮಾಡಿ. ಇದು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸಿ, ದುರ್ವಾಸನೆ ತೊಡೆದು ಹಾಕುತ್ತದೆ.
ವಿನೆಗರ್ ಉಪಯೋಗಿಸಿ ತೊಳೆಯಿರಿ:
ವಿನೆಗರ್‌ನಲ್ಲಿ ಇರುವ ಆಮ್ಲೀಯತೆಯು ಬ್ಯಾಕ್ಟೀರಿಯಾ ನಿರ್ಮೂಲನೆಗೆ ಸಹಕಾರಿಯಾಗಿ ಫ್ಲಾಸ್ಕ್ ಅಥವಾ ಬಾಟಲಿನ ಒಳಗಿನ ಭಾಗವನ್ನು ಶುದ್ಧವಾಗಿಡುತ್ತೇವೆ. ಬಾಟಲಿಗೆ ಅರ್ಧ ಕಪ್ ವಿನೆಗರ್ ಹಾಕಿ ಅರ್ಧ ಗಂಟೆ ಬಿಟ್ಟರೆ ಸಾಕು.
ಸೂರ್ಯನ ಬಿಸಿಲಿಗೆಇಡಿ:
ಬಾಟಲನ್ನು ತೊಳೆದ ನಂತರ ಅದನ್ನು ಕೆಲ ಹೊತ್ತು ಸೂರ್ಯನ ಬೆಳಕಿಗೆ ಇಡಬೇಕು. ಇದು ನೈಸರ್ಗಿಕ ರೀತಿ ಬಾಕಿಯಾದ ತೇವಾಂಶವನ್ನು ಎಳೆದಿಡುತ್ತದೆ ಮತ್ತು ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ.
ಇವೆಲ್ಲವೂ ಸರಳ ಮನೆಮದ್ದುಗಳು. ಬಾಟಲನ್ನು ನಿತ್ಯವೂ ಬಿಸಿನೀರಿನಲ್ಲಿ ತೊಳೆಯುವುದು ಮತ್ತು ನಿಯಮಿತವಾಗಿ ಒಣಗಿಸುವುದು ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯವಾಗಿದೆ.