ನಮಗೆ ನಿಮಗೆಲ್ಲಾ ಕನಸುಗಳು ಬೀಳುತ್ತೆ. ಅದು ಕೆಲವೊಮ್ಮೆ ನೆನಪಿರುತ್ತೆ, ಮತ್ತೊಮ್ಮೆ ಮರೆತು ಹೋಗಿರುತ್ತೆ. ಆದರೆ ಮಕ್ಕಳಿಗೂ ಕನಸ್ಸು ಬೀಳತ್ತಾ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಇರತ್ತೆ ಅದಕ್ಕೆ ಉತ್ತರ ಇಲ್ಲಿದೆ. ಹೌದು, ಮಕ್ಕಳಿಗೂ ಕನಸು ಬೀಳುತ್ತೆ. ವಾಸ್ತವವಾಗಿ, ಮಕ್ಕಳಿಗೆ ತುಂಬಾ ಆಳವಾದ ಮತ್ತು ಸ್ಪಷ್ಟ ಕನಸುಗಳು ಬೀಳುವ ಸಾಧ್ಯತೆ ಹೆಚ್ಚು ಇರುತ್ತದೆ.
2-3 ವರ್ಷದ ಮಕ್ಕಳಿಗೆ ಕನಸು ಬರುವುದರ ಪ್ರಾರಂಭವಾಗುತ್ತೆ. ಆದರೆ, ಅವರು ತಮ್ಮ ಕನಸುಗಳನ್ನು ಸ್ಪಷ್ಟವಾಗಿ ವಿವರಿಸಲು ಅಥವಾ ನೆನಪಿಡಲು ಹೆಚ್ಚಿನ ಶಕ್ತಿಯನ್ನು ಹೊಂದಿರೋದಿಲ್ಲ. ವಯಸ್ಸು ಹೆಚ್ಚಾದಂತೆ, ಕನಸುಗಳ ತೀವ್ರತೆ, ವಿಷಯಗಳು ಹಾಗೂ ಅವುಗಳ ನೆನಪಿನ ಸಾಮರ್ಥ್ಯವೂ ಹೆಚ್ಚಾಗುತ್ತೆ.
ಮಕ್ಕಳಿಗೆ ಬರುವ ಸಾಮಾನ್ಯ ಕನಸುಗಳು :
ಆಟ, ಆಟಿಕೆ ಮತ್ತು ಪ್ರಾಣಿಗಳ ಕನಸು:
ಮಕ್ಕಳ ದಿನನಿತ್ಯದ ಅನುಭವಗಳು ಅವರ ಕನಸುಗಳಲ್ಲೂ ಪ್ರತಿಬಿಂಬಿಸುತ್ತವೆ. ತಮ್ಮ ಇಷ್ಟದ ಆಟಿಕೆ, ಪ್ರಾಣಿಗಳು ಅಥವಾ ಟಿವಿ ಕಾರ್ಟೂನ್ ಪಾತ್ರಗಳು ಕನಸಲ್ಲಿ ಬರುವುದು ಸಾಮಾನ್ಯ.
ಅಜ್ಜಿಯ ಮನೆಯ ಕನಸು ಅಥವಾ ತಂದೆ-ತಾಯಿಯೊಂದಿಗೆ ಆಟ:
ಮನೆಯವರು, ಕುಟುಂಬದ ಸದಸ್ಯರು ಮತ್ತು ಮಕ್ಕಳಿಗೆ ಪ್ರೀತಿಯ ವ್ಯಕ್ತಿಗಳು ಕನಸುಗಳಲ್ಲಿ ಬರುತ್ತಾರೆ.
ಭಯ ಹುಟ್ಟಿಸುವ ಕನಸುಗಳು (ನೈಟ್ಮೇರ್):
ಕೆಲವೊಮ್ಮೆ ಕತ್ತಲೆ, ನಿಗೂಢ ಧ್ವನಿ ಅಥವಾ ಮಕ್ಕಳಿಗೆ ಭಯದ ಕನಸುಗಳು ಬೀಳಲು ಕಾರಣವಾಗಬಹುದು.
ಓಡಾಟದ ಕನಸುಗಳು:
ಊರಿಗೂ ಹೋಗಿ ಹೋಗುವುದು, ಹಾರುವುದು ಅಥವಾ ಎಲ್ಲೆಂದರಲ್ಲಿ ಓಡುವುದು ಇಂತಹ ಕಲ್ಪನೆಗಳಲ್ಲಿ ಮಕ್ಕಳ ಮೆದುಳು ತೊಡಗುತ್ತದೆ.
ಅಸಂಬದ್ಧ ಕನಸುಗಳು:
ಮಕ್ಕಳ ಕನಸುಗಳು ಸಾಕಷ್ಟು ವಿಚಿತ್ರವಾಗಿರಬಹುದು – ಉದಾಹರಣೆಗೆ ಮಿಠಾಯಿಗಳ ಮಳೆ ಬೀಳುವುದು, ಹಾಸಿಗೆ ಮಾತಾಡುವುದು ಇತ್ಯಾದಿ.
ಯಾಕೆ ಮಕ್ಕಳಿಗೆ ಇಂತಹ ಕನಸುಗಳು ಬೀಳುತ್ತವೆ?: ಮಕ್ಕಳ ಮನಸ್ಸು ಹೊಸ ವಿಷಯಗಳನ್ನ ಪ್ರತಿದಿನ ಗ್ರಹಿಸುತ್ತಿರುತ್ತದೆ. ಈ ಹೊಸ ಅನುಭವಗಳು ನಿದ್ರೆ ವೇಳೆ ಕನಸುಗಳಾಗಿ ಬೀಳುತ್ತವೆ. ಜೊತೆಗೆ ಮಕ್ಕಳ ದೈನಂದಿನ ಅನುಭವಗಳು – ಮಾತನಾಡುವುದು, ಆಟ ಆಡುವುದು, ಗದರಿಕೆ, ಲಾಲನೆ ಇವೆಲ್ಲಾ ಕನಸುಗಳ ಭಾಗವಾಗಬಹುದು.
ಪೋಷಕರಿಗೆ ಸಲಹೆ:
ಮಕ್ಕಳ ಕನಸುಗಳು ವಿಚಿತ್ರವಾಗಿದ್ರೂ ಭಯಪಡುವ ಅಗತ್ಯವಿಲ್ಲ.
ಅವರಿಗೆ ಪ್ರೀತಿಯಿಂದ ಕೇಳಿ: “ನೀನು ಏನು ಕನಸು ನೋಡ್ದೆ?”, “ಅದು ನಿನಗೆ ಇಷ್ಟವಾಯಿತಾ?”
ನೈಟ್ಮೇರ್ಗಳು ಬಂದಾಗ ತಾಳ್ಮೆಯಿಂದ ಸಮಾಧಾನ ಮಾಡಿ.
ನಿದ್ರೆಗೂ ಮುನ್ನ ನೆಮ್ಮದಿ ಉಂಟುಮಾಡುವ ಕಥೆ, ಮೃದುವಾದ ಸಂಗೀತ ಕೇಳಿಸಿ.
ಮಕ್ಕಳಿಗೂ ಕನಸು ಬೀಳುತ್ತೆ. ಇವು ಸಾಧಾರಣವಾಗಿದ್ದು, ಅವರ ಕಲ್ಪನೆಯ ಪ್ರತಿಬಿಂಬವಾಗಿದೆ. ಕನಸುಗಳ ಮೂಲಕವೂ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಪೋಷಕರು ತಾಳ್ಮೆಯಿಂದ ಅವರ ಕನಸುಗಳನ್ನು ಕೇಳಿ, ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಮಕ್ಕಳ ಭಾವಜೀವನಕ್ಕೂ ನಿಕಟ ಸಂಬಂಧ ಬೆಳೆಸಬಹುದು.