ಇಂತಹ ಹುಚ್ಚರು ಇರ್ತಾರ? ಅಡುಗೆ ರುಚಿಯಾಗಿ ಮಾಡಿಲ್ಲವೆಂದು ಪತ್ನಿಯನ್ನ ಮಹಡಿಯಿಂದ ತಳ್ಳಿದ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದಲ್ಲಿ, ದಂಪತಿಗಳ ನಡುವೆ ಆಹಾರದ ವಿಚಾರವಾಗಿ ಜಗಳ ನಡೆದಿದ್ದು, ಅದು ತಾರಕಕ್ಕೇರಿ ಕೋಪದಿಂದ ಪತಿ ತನ್ನ ಹೆಂಡತಿಯನ್ನು ಎರಡನೇ ಮಹಡಿಯಿಂದ ತಳ್ಳಿರುವ ಘಟನೆ ನಡೆದಿದೆ. ಈ ಘಟನೆಯ ಸಿಸಿಟಿವಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆತ ತನ್ನ ಪತ್ನಿಯನ್ನು ಮಹಡಿಯಿಂದ ತಳ್ಳುತ್ತಿರುವ ದೃಶ್ಯ ಸೆರೆಯಾಗಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಮಾರ್ಚ್ 30 ರಂದು ಟ್ವಿಟರ್ ಖಾತೆ @ZafarHeretic ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಪೋಸ್ಟ್ ಮಾಡಿದ ಕೇವಲ ಒಂದು ದಿನದ ನಂತರ 300,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆಯಲಾಗಿದೆ. ಈ ವಿಡಿಯೋ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಚಿಕನ್ ಕರಿ ರುಚಿಯಾಗಿಲ್ಲ ಎಂಬ ಕಾರಣಕ್ಕೆ ಪತಿ ಪತ್ನಿಯನ್ನು ಮಹಡಿಯಿಂದ ತಳ್ಳಿದ್ದಾನೆ ಎಂದು ವಿಡಿಯೋ ವಿವರಣೆಯಲ್ಲಿ ಹೇಳಲಾಗಿದೆ.

ಮಹಿಳೆಯೊಬ್ಬರು ಮೇಲಿಂದ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಹಿಳೆ ಬಿದ್ದ ತಕ್ಷಣ ನೋವಿನಿಂದ ಕಿರುಚಿದ್ದು, ಆಕೆಯ ಕಿರುಚಾಟ ಕೇಳಿದ ನೆರೆಹೊರೆಯವರು ಆಕೆಯ ಸಹಾಯಕ್ಕೆ ಬಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!