ಇತ್ತೀಚೆಗೆ ಭೂಮಿಮೇಲೆ ಒಂದಲ್ಲಾ ಒಂದು ರೋಗಗಳು ಬರುತ್ತಲೇ ಇವೆ, ಮಳೆಗಾಲ ಬಂದಂತೆ ಸಣ್ಣಪುಟ್ಟ ಶೀತ, ಥಂಡಿ, ಜ್ವರಕ್ಕೆ ತುತ್ತಾಗುತ್ತಲೇ ಇದ್ದೇವೆ. ಮಳೆಗಾಲ ಬಂದಾಗಷ್ಟೇ ಅಲ್ಲ ಸದಾ ಆರೋಗ್ಯವಾಗಿರೋಕೆ ಇದೆಲ್ಲಾ ಮಾಡಿ..
ಸೋಂಬೇರಿಯಾಗ್ಬೇಡಿ, ವ್ಯಾಯಾಮ ಮಾಡಿ
ಹೆಚ್ಚೆಚ್ಚು ನೀರು
ಸೊಂಪಾದ ನಿದ್ದೆ
ಆರೋಗ್ಯಕ್ಕೆ ಬೇಕಾದ ಆಹಾರ
ಮೈ-ಕೈ ಸ್ವಚ್ಛವಾಗಿಟ್ಟುಕೊಳ್ಳೋ ಅಭ್ಯಾಸ
ಕುಡಿಯುವ ನೀರಿನ ಸ್ವಚ್ಛತೆ ಕಾಪಾಡಿ
ಮದ್ಯಪಾನ, ಧೂಮಪಾನ ಬೇಡ್ವೇ ಮಾಡಿ
ಇಮ್ಯುನಿಟಿ ಹೆಚ್ಚಿಸುವ ಹಣ್ಣು ತರಕಾರಿಗಳಿಗೆ ಆದ್ಯತೆ ಕೊಡಿ
ಒತ್ತಡದ ಕೆಲಸ ಬಿಟ್ಟು ಇಷ್ಟದ ಕೆಲಸ ಮಾಡಿ.
ವರ್ಷವಿಡೀ ಹೇಗೇಗೋ ಇದ್ದು, ಕೊರೋನಾ, ಡೆಂಗ್ಯೂ ಬಂದ ಕಾಲಕ್ಕೆ ಇಮ್ಯುನಿಟಿಗಾಗಿ ವಿಟಮಿನ್ ಮಾತ್ರೆಗಳು, ಅರಿಶಿಣ ಹಾಲು, ಕಷಾಯ ಕುಡಿಯೋದಲ್ಲ. ಸದಾ ಆರೋಗ್ಯದ ಬಗ್ಗೆ ಗಮನ ಇಡಿ. ಜೀವನದಲ್ಲಿ ನೂರು ಸಮಸ್ಯೆಗಳಿರಬಹುದು, ಆದರೆ ಆರೋಗ್ಯವೇ ಸರಿ ಇಲ್ಲವಾದರೆ ಏನು ಮಾಡ್ತೀರಿ..