ಜೀರ್ಣಕ್ರಿಯೆ ದೇಹದ ಅತ್ಯಾವಶ್ಯಕ ಕ್ರಿಯೆಯಾಗಿದೆ. ಹೊಟ್ಟೆಯಿಂದಲೇ ಸಾಕಷ್ಟು ಕಾಯಿಲೆಗಳು ಉದ್ಭವಿಸುತ್ತವೆ. ಹಾಗಾಗಿ ಜೀರ್ಣಕ್ರಿಯೆ ಚೆನ್ನಾಗಿದ್ರೆ ಯಾವ ಸಮಸ್ಯೆಯೂ ನಿಮ್ಮ ಬಳಿ ಬರೋದಿಲ್ಲ. ಜೀರ್ಣಕ್ರಿಯೆ ಚೆನ್ನಾಗಿ ಆಗಲು ಈ ರೀತಿ ಮಾಡಿ…
- ಬೆಳಗ್ಗೆ ಖಾಲಿ ಹೊಟ್ಟೆಗೆ ಕಾಫಿ ಟೀ ಹಾಕದೇ ಶುದ್ಧ ನೀರು ಕುಡಿಯಿರಿ, ಹೊಟ್ಟೆಯ ವಿಷ ಪದಾರ್ಥಗಳನ್ನು ನೀರು ಹೊರಹಾಕಿ ಜೀರ್ಣಕ್ರಿಯೆ ವೃದ್ಧಿ ಮಾಡುತ್ತದೆ.
- ಡೀಟಾಕ್ಸ್ ಪಾನೀಯಗಳನ್ನು ಸೇವನೆ ಮಾಡಿ, ನಿಂಬು, ಶಿಯಾ ಸೀಡ್ಸ್ ನೀರು ಅಥವಾ ಪಿಯರ್ ರಸ ಹೀಗೆ ದೇಹದಿಂದ ಕೆಟ್ಟ ಅಂಶಗಳು ಹೊರಹೋಗುವ ಪಾನೀಯಗಳನ್ನು ಕುಡಿಯಿರಿ.
- ಊಟದಲ್ಲಿ ಪ್ರೋಟೀನ್ ಹಾಗೂ ಫೈಬರ್ ಇದ್ದೇ ಇರಲಿ. ಮರೆಯದೇ ಫೈಬರ್ ಸೇವಿಸಿ ಅದರಿಂದಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ದೀರ್ಘಕಾಲ ಹಸಿವೂ ಆಗೋದಿಲ್ಲ.
- ಊಟದ ನಂತರ, ತಿಂಡಿಯ ನಂತರ ದೊಪ್ಪೆಂದು ಹಾಸಿಗೆ ಮೇಲೆ ಮಲಗಬೇಡಿ, ಓಡಾಟ ನಡೆಸಿ ಚಟುವಟಿಕೆಯಿಂದಿರಲಿ ಎರಡು ಗಂಟೆಗಳ ನಂತರ ನಿದ್ದೆ ಮಾಡಿ.
- ಅತಿಯಾದ ಸಕ್ಕರೆ ಹಾಗೂ ಕೆಫಿನ್ ಸೇವನೆಗೆ ಗುಡ್ ಬೈ ಹೇಳಿಬಿಡಿ. ಇದು ಅನಗತ್ಯ ಕ್ಯಾಲೋರಿಗಳನ್ನು ದೇಹಕ್ಕೆ ನೀಡುತ್ತದೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ.