ದೈನಂದಿನ ಜೀವನದಲ್ಲಿ ಕೆಲಸ, ಜವಾಬ್ದಾರಿ ಮತ್ತು ಒತ್ತಡಗಳ ನಡುವೆಯೇ ನಿಮಗಾಗಿ ಸಮಯ ಹುಡುಕುವುದು ಕಷ್ಟ. ಇಂತಹ ಸಂದರ್ಭದಲ್ಲಿ ಕೇವಲ 10 ನಿಮಿಷಗಳ ಪಾದ ಮಸಾಜ್ ದೇಹ-ಮನಸ್ಸಿಗೆ ನೀಡುವ ಆರಾಮ ಅಚ್ಚರಿಯಾಗಿದೆ. ಪಾದಗಳಲ್ಲಿ ಇರುವ ವಿಶೇಷ ಒತ್ತಡ ಬಿಂದುಗಳು ದೇಹದ ಹಲವು ವ್ಯವಸ್ಥೆಗಳಿಗೆ ನೇರವಾಗಿ ಪರಿಣಾಮ ಬೀರುವುದರಿಂದ, ಪಾದದ ಮಸಾಜ್ ಒಂದು ಸರಳ ಆದರೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.
- ಒತ್ತಡ ಮತ್ತು ಆಯಾಸ ನಿವಾರಣೆ: ಪಾದಗಳಲ್ಲಿ ಇರುವ ಪ್ರೆಶರ್ ಪಾಯಿಂಟ್‌ಗಳಿಗೆ ಸೌಮ್ಯ ಒತ್ತಡ ನೀಡಿದಾಗ ರಕ್ತ ಸಂಚಾರ ಹೆಚ್ಚಾಗಿ ನರಮಂಡಲ ವಿಶ್ರಾಂತಿ ಪಡೆಯುತ್ತದೆ. ಇದರಿಂದ ದಿನಪೂರ್ತಿಯ ಸ್ಟ್ರೆಸ್ ಕ್ಷಣಾರ್ಧದಲ್ಲಿ ಕಡಿಮೆಯಾಗುತ್ತದೆ.
- ಗಾಢ ಮತ್ತು ಶಾಂತ ನಿದ್ರೆ: ಪಾದ ಮಸಾಜ್ ದೇಹದಲ್ಲಿ ಸೆರೋಟೋನಿನ್ ಬಿಡುಗಡೆಗೆ ಸಹಾಯ ಮಾಡುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಿ, ನಿದ್ರಾಹೀನತೆ ಹಾಗೂ ಆತಂಕವನ್ನು ಕಡಿಮೆ ಮಾಡುತ್ತದೆ.
- ಹಾರ್ಮೋನ್ ಸಮತೋಲನ: ಎಂಡೋಕ್ರೈನ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಮೂಲಕ ಹಾರ್ಮೋನ್‌ಗಳ ಸಮತೋಲನ ಕಾಪಾಡುತ್ತದೆ. ಇದರಿಂದ ಮಹಿಳೆಯರ ಮೂಡ್ ಸ್ವಿಂಗ್ಸ್ ಮತ್ತು ಮುಟ್ಟಿನ ನೋವು ಕಡಿಮೆಯಾಗುವ ಸಾಧ್ಯತೆ ಹೆಚ್ಚು.
- ದೇಹದ ಶಕ್ತಿಯ ವೃದ್ಧಿ: ರಕ್ತಸಂಚಾರ ಸುಧಾರಿಸಿದಾಗ ದೇಹಕ್ಕೆ ಹೆಚ್ಚಿನ ಆಮ್ಲಜನಕ ಲಭಿಸಿ ನೋವು, ಜಡತೆ ಮತ್ತು ಆಯಾಸ ಕಡಿಮೆಯಾಗುತ್ತದೆ. ದಿನಪೂರ್ತಿ ಚುರುಕುತನ ಉಳಿಯುತ್ತದೆ.

