August 31, 2026
Monday, August 31, 2026
spot_img

Mindset | ಬುದ್ಧಿ ಹೇಳೋದು ಸುಲಭ, ಆದ್ರೆ ತಲೆಗೆ ಹತ್ತಿಸಿಕೊಳ್ಳೋಕೆ ಬುದ್ಧಿ ಇರಬೇಕಲ್ಲ?

ಕನ್ನಡದಲ್ಲಿ ಒಂದು ಮಾತಿದೆ: “ಎಚ್ಚರ ಇದ್ದವರಿಗೆ ಎಬ್ಬಿಸಬಹುದು, ಆದರೆ ನಿದ್ದೆ ಮಾಡುವಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ.” ಈ ಮಾತು ಎಷ್ಟು ಸತ್ಯ ಅಲ್ವಾ?

ಜೀವನದಲ್ಲಿ ಕೆಲವೊಮ್ಮೆ ನಾವು ಎದುರಿಸುವ ದೊಡ್ಡ ಸವಾಲು ಎಂದರೆ ಅದು ವ್ಯಕ್ತಿಗಳ ನಡುವಿನ ಸಂವಹನ. ಸಾವಿರ ಬಾರಿ ತಿಳಿಹೇಳಿದರೂ, ಅರ್ಥವಾಗದಂತೆ ವರ್ತಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭಗಳಲ್ಲಿ ಮಾತನಾಡುವವರ ತಾಳ್ಮೆ ಕಟ್ಟೆಯೊಡೆಯುವುದು ಸಹಜ.

ಬುದ್ಧಿವಂತರಿಗೆ ಒಂದು ಮಾತು ಸಾಕು, ಆದರೆ ಹಠ ಹಿಡಿದವರಿಗೆ ಎಷ್ಟು ಹೇಳಿದರೂ ಅದು ವ್ಯರ್ಥ ಎಂಬಂತಾಗಿದೆ. ಇದು ಕೇವಲ ವೈಯಕ್ತಿಕ ಸಂಬಂಧಗಳಲ್ಲಷ್ಟೇ ಅಲ್ಲದೆ, ವೃತ್ತಿಜೀವನದಲ್ಲೂ ದೊಡ್ಡ ಅಡ್ಡಿಯಾಗಿ ಪರಿಣಮಿಸುತ್ತಿದೆ.

ಅರ್ಥ ಮಾಡಿಕೊಳ್ಳುವ ಆಸಕ್ತಿ ಇಲ್ಲದವರಿಗೆ ನೀವು ನೀಡುವ ಪ್ರತಿಯೊಂದು ವಿವರಣೆಯೂ ಕೇವಲ ಶಬ್ದವಾಗಿ ಉಳಿಯುತ್ತದೆ, ಸಂದೇಶವಾಗಿ ತಲುಪುವುದಿಲ್ಲ.

ನೆನಪಿಡಿ.. “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಎನ್ನುವಂತೆ, ನೀವು ಕಟ್ಟುವ ಅರಿವಿನ ಗೋಡೆಯನ್ನು ಕೆಲವರು ಅಜ್ಞಾನದ ದೊಣ್ಣೆಯಿಂದ ಒಂದೇ ನಿಮಿಷದಲ್ಲಿ ಕೆಡವಬಹುದು. ಅಂತಹ ಜಾಗದಲ್ಲಿ ಶಕ್ತಿಯನ್ನು ವ್ಯಯಿಸದಿರುವುದೇ ಜಾಣತನ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !